September 10, 2026
Thursday, September 10, 2026
spot_img

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರುಶನ ಸಮಯದಲ್ಲಿ ಬದಲಾವಣೆ: ಹೀಗಿದೆ ಹೊಸ ವೇಳಾಪಟ್ಟಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ಶ್ರೀ ದೇವರ ದರುಶನಕ್ಕೆ ಒಂದು ಗಂಟೆ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಇದರಿಂದ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್. ಇಂಜಾಡಿ ತಿಳಿಸಿದ್ದಾರೆ.

ಈ ಹಿಂದೆ ಮಧ್ಯಾಹ್ನ 1.30 ರಿಂದ 3.30 ರ ವರೆಗೆ ದೇವರ ದರುಶನಕ್ಕೆ ಅವಕಾಶ ಇರಲಿಲ್ಲ. ಇದೀಗ ಆಡಳಿತ ಮಂಡಳಿಯ ನಿರ್ಣಯದ ಮೇರೆಗೆ 2.00 ರಿಂದ 3.00 ಗಂಟೆ ತನಕ ಮಾತ್ರ ದೇಗುಲ ಬಂದ್ ಮಾಡಲಾಗುವುದು. ಇದರಿಂದ ಭಕ್ತರಿಗೆ ಹೆಚ್ಚುವರಿ ಒಂದು ಗಂಟೆಗಳ ದರುಶನಕ್ಕೆ ಅವಕಾಶ ಸಿಗಲಿದೆ.

ಬೆಳಗ್ಗೆ 6.30 ರಿಂದ 2.00 ಗಂಟೆ ತನಕ ಅಪರಾಹ್ನ 3.00 ರಿಂದ 8.30 ರ ತನಕ ದೇವರ ದರುಶನ ಇರಲಿದೆ. ಈ ನಡುವೆ ಶ್ರೀ ದೇವರ ಮದ್ಯಾಹ್ನ ಮತ್ತು ರಾತ್ರಿ ಮಹಾಪೂಜೆಯ ಸಮಯ ಮಾತ್ರ ಈ ಹಿಂದಿನಂತೆ ಅಲ್ಪ ಕಾಲ ದೇವರ ದರುಶನ ಸ್ಥಗಿತಗೊಳಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !