‘ಟೀಂ ಭಾರತ್’ ಅಂತ ಜೆರ್ಸಿ ಬದಲಾಯಿಸಿ, ಸೆಹ್ವಾಗ್ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯಾ ಬದಲು ದೇಶದ ಹೆಸರನ್ನು ರಿಪಬ್ಲಿಕ್ ಆಫ್ ಭಾರತ್ ಎಂದು ಬದಲಾಯಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಪರ ವಿರೋಧ ನಡೆಯುತ್ತಿದೆ.

ಇದೀಗ ಲೆಜೆಂಡರಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಭಾರತ್ ಹೆಸರಿಗೆ ಬೆಂಬಲ ಸೂಚಿಸಿದ್ದು, ಟೀಂ ಇಂಡಿಯಾ ಜೆರ್ಸಿಯನ್ನು ಈಕೂಡಲೇ ಭಾರತ್ ಎಂದು ಬದಲಾಯಿಸಿ ಎಂದು ಬಿಸಿಸಿಐಗೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ್ದು, ಟೀಂ ಇಂಡಿಯಾ ಅಲ್ಲ, ಟೀಂ ಭಾರತ್ ಎಂದು ಜೆರ್ಸಿ ಬದಲಾಯಿಸಿ. ಹೃದಯದಲ್ಲಿ ದೇಶಪ್ರೇಮ ತುಂಬಿಕೊಂಡು ನಮ್ಮ ಆಟಗಾರರು ಜೆರ್ಸಿ ಹಾಕುತ್ತಾರೆ ಎಂದಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!