ತಮಿಳುನಾಡಿನಲ್ಲಿ ಹಿಂದಿಯ ರೂಪಾಯಿ ಚಿಹ್ನೆ ಬದಲು: ಮೂರ್ಖತನದ ನಿರ್ಧಾರ ಎಂದ ಅಣ್ಣಾಮಲೈ!

ಹೊಸದಿಗಂತ ವರದಿ, ಮಂಡ್ಯ : 

ತಮಿಳುನಾಡಿನಲ್ಲಿ 2025-26ರ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆಯನ್ನು ತಮಿಳು ಅಕ್ಷರದೊಂದಿಗೆ ಬದಲಾಯಿಸಿದ್ದಕ್ಕಾಗಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಡಿಎಂಕೆ ಪಕ್ಷವನ್ನು ಟೀಕಿಸಿದ್ದಾರೆ.

ಈ ಚಿಹ್ನೆಯನ್ನು ತಮಿಳಿಗರು ವಿನ್ಯಾಸಗೊಳಿಸಿದ್ದಾರೆ ಎಂದು ಉಲ್ಲೇಖಿಸಿರುವ ಅವರು, ಈ ಕ್ರಮವನ್ನು “ಮೂರ್ಖತನ” ಎಂದು ಕರೆದಿದ್ದಾರೆ, ಸ್ಟುಪಿಡ್ ಸ್ಟಾಲಿನ್ ಎಂದು ಹೇಳಿದ್ದಾರೆ.

ತಮಿಳಿಗನೊಬ್ಬ ವಿನ್ಯಾಸಗೊಳಿಸಿದ ರೂಪಾಯಿ ಚಿಹ್ನೆಯನ್ನು ಬದಲಾಯಿಸುತ್ತದೆ. ಈ ಚಿಹ್ನೆಯನ್ನು ಇಡೀ ಭಾರತ ಅಳವಡಿಸಿಕೊಂಡಿದೆ ಮತ್ತು ನಮ್ಮ ಕರೆನ್ಸಿಯಲ್ಲಿ ಸೇರಿಸಲಾಗಿದೆ. ಈ ಚಿಹ್ನೆಯನ್ನು ವಿನ್ಯಾಸಗೊಳಿಸಿದ ತಿರು ಉದಯ್ ಕುಮಾರ್ ಮಾಜಿ ಡಿಎಂಕೆ ಶಾಸಕರ ಮಗ. ನೀವು ಎಷ್ಟು ಇನ್ನೆಷ್ಟು ಮೂರ್ಖತನದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ? ತಿರು ಎಂಕೆ ಸ್ಟಾಲಿನ್ ಅವರೇ ಎಂದು ಅವರು ಎಕ್ಸ್​ ನಲ್ಲಿ ಬರೆದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!