ಹೊಸದಿಗಂತ ಡಿಜಿಟಲ್ ಡೆಸ್ಕ್:
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 2ಜಿ ಮೊಬೈಲ್ ಸೈಟ್‌ಗಳನ್ನು 2,426 ಕೋಟಿ ವೆಚ್ಚದಲ್ಲಿ 4ಜಿಗೆ ಮೇಲ್ದರ್ಜೆಗೇರಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ತಿಳಿಸಿದ್ದಾರೆ.
ಈ ಯೋಜನೆ 10 ರಾಜ್ಯಗಳಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ವಿಸ್ತರಣೆಗೊಂಡಿದ್ದು, ಈ ಕಾರ್ಯವನ್ನು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ BSNL ಗೆ ವಹಿಸಲಾಗಿದೆ.
‘ನಾವು ಇಲ್ಲಿ 4G ಹೊಂದಿದ್ದೇವೆ ಆದರೆ LWE ಪ್ರದೇಶಗಳಲ್ಲಿ 2G ಸಂಪರ್ಕವಿದೆ.2G ಸೌಲಭ್ಯದ ಬದಲಿಗೆ 4G ಒದಗಿಸಲು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ 2,542 ಮೊಬೈಲ್ ಟವರ್‌ಗಳನ್ನು 2G ಯಿಂದ 4G ಗೆ ನವೀಕರಿಸಲು 2,426 ಕೋಟಿ ರೂ. ಅನುಮೋದನೆ ನೀಡಿದೆ. ಈ ಎಲ್ಲಾ ಟವರ್‌ಗಳು ನಕ್ಸಲ್ ಪೀಡಿತ ಪ್ರದೇಶದಲ್ಲಿವೆ ಎಂದು ಠಾಕೂರ್ ತಿಳಿಸಿದರು.
ಮೊಬೈಲ್ ಟವರ್‌ಗಳನ್ನು 4ಜಿಗೆ ಅಪ್‌ಗ್ರೇಡ್ ಮಾಡಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋರ್ ನೆಟ್‌ವರ್ಕ್, ರೇಡಿಯೋ ನೆಟ್‌ವರ್ಕ್ ಮತ್ತು ಟೆಲಿಕಾಂ ಉಪಕರಣಗಳನ್ನು ಬಳಸಲಾಗುವುದು . ಈ ಎಲ್ಲಾ ಸೈಟ್‌ಗಳನ್ನು BSNL ನವೀಕರಿಸುತ್ತದೆ ಮತ್ತು ನಡೆಸುತ್ತದೆ ಎಂದು ಠಾಕೂರ್ ಹೇಳಿದರು.
2,542 ಮೊಬೈಲ್ ಟವರ್‌ಗಳು 10 ರಾಜ್ಯಗಳಲ್ಲಿ ಹರಡಿಕೊಂಡಿವೆ.ಇದರಲ್ಲಿ ಆಂಧ್ರಪ್ರದೇಶ 346, ಬಿಹಾರ 16, ಛತ್ತೀಸ್‌ಗಢ 971, ಜಾರ್ಖಂಡ್ 450, ಮಧ್ಯಪ್ರದೇಶ 23, ಮಹಾರಾಷ್ಟ್ರ 125, ಒಡಿಶಾ 483, ಪಶ್ಚಿಮ ಬಂಗಾಳ 33, ಉತ್ತರ ಪ್ರದೇಶ 42 ಮತ್ತು ತೆಲಂಗಾಣ 53 ಸೇರಿವೆ ಎಂದು ಸಚಿವರು ಹೇಳಿದರು.