ಪ್ರಶ್ನೆ ಪತ್ರಿಕೆಯ ಬದಲು ವಿದ್ಯಾರ್ಥಿಗೆ ಕೀ ಉತ್ತರ ಪತ್ರಿಕೆಯನ್ನೇ ಕೊಟ್ಟ ಕೇರಳ ವಿಶ್ವವಿದ್ಯಾನಿಲಯ: ಮುಂದೆ ಏನಾಯಿತು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳ ವಿಶ್ವವಿದ್ಯಾಲಯ ಎಡವಟ್ಟು ಒಂದನ್ನು ಮಾಡಿದ್ದೂ, ಮರುಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಯೋರ್ವನಿಗೆ ಪ್ರಶ್ನೆ ಪತ್ರಿಕೆಯ ಬದಲಾಗಿ ಕೀ ಉತ್ತರ ಪತ್ರಿಕೆಯನ್ನೇ ನೀಡಿದೆ. ಇದರಿಂದ ಕೊನೆಗೂ ಪರೀಕ್ಷೆ ರದ್ದಾಗಿದೆ.
ಆದರೆ ಇಲ್ಲಿ ವಿದ್ಯಾರ್ಥಿ ಅಧಿಕಾರಿಗಳೊಂದಿಗೆ ಸಮಸ್ಯೆಯನ್ನು ಸರಿಪಡಿಸುವ ಬದಲು ಉತ್ತರ ಪುಸ್ತಕವನ್ನು ಭರ್ತಿ ಮಾಡಿ ಸಲ್ಲಿಸಿದ್ದಾನೆ. ಆದರೆ, ಮೌಲ್ಯಮಾಪಕರು ವಿಶ್ವವಿದ್ಯಾಲಯದ ಎಡವಟ್ಟನ್ನು ಗುರುತಿಸಿದ ನಂತರವೇ ಈ ದೊಡ್ಡ ಲೋಪ ಬೆಳಕಿಗೆ ಬಂದಿದೆ.
ಸದ್ಯ ಮರುಪರೀಕ್ಷೆ ರದ್ದಾಗಿದ್ದು, ಮೇ 3ರಂದು ಮತ್ತೆ ಮರುಪರೀಕ್ಷೆಯನ್ನು ನಿಗದಿ ಮಾಡಲಾಗಿದೆ.
ಕೊರೊನಾದಿಂದ ನಾಲ್ಕನೇ ಸೆಮಿಸ್ಟರ್ ಬಿಎಸ್ಸಿ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯು ನಿಗದಿತ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದಾಗ, ಫೆಬ್ರವರಿಯಲ್ಲಿ ಮರುಪರೀಕ್ಷೆಯನ್ನು ನಡೆಸಲಾಯಿತು. ಆದರೆ, ಪರೀಕ್ಷಾ ನಿಯಂತ್ರಕರ ಕಚೇರಿಯು ಪರೀಕ್ಷೆಯ ಕೀ ಉತ್ತರಗಳನ್ನು ಪ್ರಶ್ನೆ ಪತ್ರಿಕೆ ಮೇಲೆಯೇ ಮುದ್ರಿಸಿತ್ತು. ಅದನ್ನು ಪರೀಕ್ಷಾ ಮೇಲ್ವಿಚಾರಕರು ವಿದ್ಯಾರ್ಥಿಗೆ ನೀಡಿದ್ದರು. ಮೊದಲೇ ಕೀ ಉತ್ತರ ಇದ್ದ ಪ್ರಶ್ನೆ ಪತ್ರಿಕೆಯನ್ನು ನೋಡಿಕೊಂಡು ವಿದ್ಯಾರ್ಥಿ ಪರೀಕ್ಷೆ ಬರೆದಿದ್ದ. ಆದರೆ ಮೌಲ್ಯಮಾಪಕರು ವಿದ್ಯಾರ್ಥಿಯ ಉತ್ತರ ಪುಸ್ತಕ ಮತ್ತು ಅವರು ಪಡೆದ ಕೀ ಉತ್ತರದ ಜತೆಗೆ ಪ್ರಶ್ನೆ ಪತ್ರಿಕೆಯನ್ನು ಕೇಳಿದಾಗ ಈ ಸಂಗತಿ ವಿಶ್ವವಿದ್ಯಾಲಯದ ಗಮನಕ್ಕೆ ಬಂದಿದೆ.
ಈ ಎಡವಟ್ಟಿನ ಬಗ್ಗೆ ಪರೀಕ್ಷಾ ಮೇಲ್ವಿಚಾರಕರಾಗಲಿ ಅಥವಾ ವಿದ್ಯಾರ್ಥಿಯಾಗಲಿ ಗಮನಕ್ಕೆ ತಂದಿಲ್ಲ. ಇದೀಗ ಪರೀಕ್ಷೆಯನ್ನು ರದ್ದುಗೊಳಿಸಿರವ ವಿಶ್ವವಿದ್ಯಾಲಯದ ಕುಲಪತಿ ತನಿಖೆಗೆ ಆದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!