ದಾವಣಗೆರೆಯ ಚನ್ನಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಚನ್ನಗಿರಿಯಲ್ಲಿ ಬಂಧನದಲ್ಲಿರುವ ವ್ಯಕ್ತಿ ಮೂರ್ಛೆ ರೋಗದಿಂದ ಸತ್ತರೆ ಅದು ಜೈಲಿನಲ್ಲಿ ಆಗುವ ಸಾವಲ್ಲ. ಎಫ್‌ಐಆರ್ ಇಲ್ಲದೇ ಈ ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದಿರುವುದು ಪೊಲೀಸರ ಕಡೆಯಿಂದ ತಪ್ಪಾಗಿದೆ. ತಪ್ಪಿನಿಂದಾಗಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆದೇಶ ನೀಡಿದ್ದೇನೆ ಎಂದರು.
ಕರ್ತವ್ಯಲೋಪ ಆರೋಪದಡಿ ಡಿವೈಎಸ್ಪಿ ಪ್ರಶಾಂತ್ ಹಾಗೂ ಸಿಪಿಐ ನಿರಂಜನ್ ಅವರನ್ನು ಅಮಾನತುಗೊಳಿಸಿ ಸಿಎಂ ಆದೇಶ ಹೊರಡಿಸಿದ್ದಾರೆ.