ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದನದಿಂದ ಬಿಜೆಪಿ ಸದಸ್ಯರನ್ನು ಅಮಾನತು ಮಾಡಿರುವುದನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಂಡಿಸಿದ್ದು,ವಿಧಾನಸಭೆಯ ಸ್ಪೀಕರ್ ಕಚೇರಿ ಎದುರು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಲಾಗುತ್ತಿದೆ.
ಡಾ.ಸಿಎನ್ ಅಶ್ವತ್ಥನಾರಾಯಣ್, ವಿ.ಸುನೀಲ್ ಕುಮಾರ್, ಆರ್ ಅಶೋಕ್, ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ಧೀರಜ್ ಮುನಿರಾಜ್, ಉಮರ್ ನಾಥ್ ಕೋಟ್ಯನ್,ಅರವಿಂದ್ ಬೆಲ್ಲದ್, ಅರಗ ಜ್ಞಾನೇಂದ್ರ, ವೈ ಭರತ್ ಶೆಟ್ಟಿ ಅವರನ್ನು ಸದನ ಮುಗಿಯುವವರೆಗೂ ಅಮಾನತುಗೊಳಿಸುವ ಕರ್ನಾಟಕ ವಿಧಾನಸಭೆ ಕಾರ್ಯವಿಧಾನದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸುವಂತೆ ವಿಧಾನಸಭೆಯಲ್ಲಿ ಸಚಿವ ಹೆಚ್ ಕೆ ಪಾಟೀಲ್ ಅವರು ಮಂಡಿಸಿದರು.
ಈ ವೇಳೆ ಸ್ಪೀಕರ್ ಯು.ಟಿ ಖಾದರ್ ವಿಷಾಧದಿಂದ ಮತಕ್ಕೆ ಹಾಕುತ್ತಿದ್ದೇನೆ. ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಅಧಿವೇಶನದ ಮುಗಿಯುವವರೆಗೂ ಸದನದಿಂದ ಅಮಾನತುಗೊಳಿಸಿ ಆದೇಶಿಸಿದರು.
ಬಳಿಕ ಸದನದಿಂದ ಅಮಾನತುಗೊಂಡ ಶಾಸಕರನ್ನು ಮಾರ್ಷಲ್ ಗಳು ಹೊರ ಹಾಕಲು ಪ್ರಯತ್ನಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಅದೇಗೆ ಹೊರ ಹಾಕುತ್ತೀರಿ ಎಂಬುದಾಗಿ ಪ್ರತಿಭಟನೆ ನಡೆಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಮಾನತುಗೊಂಡ ಶಾಸಕರು ಸೇರಿದಂತೆ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆಯಲ್ಲಿ ಬಿಪಿ ಹೆಚ್ಚಾಗಿ ಶಾಸಕ ಬಸವಗೌಡ ಪಾಟೀಲ್ ಕುಸಿದು ಬಿದ್ದು ಅಸ್ವಸ್ಥಗೊಂಡರು. ಅವರನ್ನನ ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.