ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಕೇದಾರನಾಥನ ದರುಶನಕ್ಕೆ ತಯಾರಿದ್ದೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದಿನಿಂದ ಚಾರ್​ಧಾಮ್ ಯಾತ್ರೆ ಆರಂಭಗೊಳ್ಳಲಿದೆ. ಮುಂದಿನ 6 ತಿಂಗಳ ಕಾಲ ಯಾತ್ರಿಕರು ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ.

Kedarnath Temple - Wikipediaವಾಸ್ತವವಾಗಿ, ಚಾರ್‌ಧಾಮ್ ಯಾತ್ರೆಯು ಜಗತ್ತಿನ ಅತ್ಯಂತ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ಕೇದಾರನಾಥ ಧಾಮವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ ಮತ್ತು ಇದು ಶಿವನಿಗೆ ಅರ್ಪಿತವಾಗಿದೆ. ಬದರಿನಾಥ ಧಾಮವು ವಿಷ್ಣುವಿಗೆ ಅರ್ಪಿತವಾಗಿದೆ.

Chardham Tour Packageಗಂಗೋತ್ರಿ ಧಾಮವು ಗಂಗಾ ಮಾತೆಗೆ ಸಮರ್ಪಿತವಾಗಿದೆ ಮತ್ತು ಯಮುನೋತ್ರಿಯು ಯಮುನೆಗೆ ಸಮರ್ಪಿತವಾಗಿದೆ. ಈ ಬಾರಿ ಚಾರ್‌ಧಾಮ್ ಯಾತ್ರೆಗೆ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಪ್ರಯಾಣ ಮಾರ್ಗದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!