ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮಿಡಿ ಲೆಜೆಂಡ್ ಎಂದೇ ಖ್ಯಾತಿಯಾಗಿರುವ ಚಾರ್ಲಿ ಚಾಪ್ಲಿನ್ ಅವರ ಪುತ್ರಿ, ನಟಿ ಜೋಸೆಫೀನ್ ಚಾಪ್ಲಿನ್ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಪ್ಯಾರಿಸ್ನಲ್ಲಿ ಜುಲೈ 13ರಂದು ಜೋಸೆಫೀನ್ ಅವರು ನಿಧನರಾದರು ಎಂದು ಕುಟುಂಬಸ್ಥರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಜೋಸೆಫೀನ್ ಅವರು ಚಾರ್ಲಿ ಚಾಪ್ಲಿನ್ ಮತ್ತು ಊನಾ ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೆಯವರಾಗಿದ್ದಾರೆ. ಜೋಸೆಫೀನ್ ಚಾಪ್ಲಿನ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದೀಗ ಜೋಸೆಫೀನ್ ಅವರು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.
Charlie Chaplin’s daughter Josephine Chaplin passes away at 74
Read @ANI Story | https://t.co/DLl7JDHnet#CharlieChaplin #JosephineChaplin pic.twitter.com/EL5kSsZ6Ci
— ANI Digital (@ani_digital) July 22, 2023