ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಬ್ರಹ್ಮಣ್ಯದ ಶ್ರೀ ಕ್ಷೇತ್ರದ ಉತ್ತಾರಾದಿ ಮಠದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 54ನೇ ವರ್ಷದ ಗಣೇಶೋತ್ಸವವು ಭಕ್ತಿ ಸಡಗರದಿಂದ ಆರಂಭವಾಗಿದೆ.
ಚೌತಿಯ ದಿನ ಶ್ರೀ ಮಹಾಗಣಪತಿಗೆ ರಜತ ಕಿರೀಟ ಮತ್ತು ಬೆಳ್ಳಿಯ ಪಾಶಾಂಕುಶ ಸಮರ್ಪಣೆ ನೆರವೇರಿತು. ಪುರೋಹಿತ ರಮಾನಂದ ಭಟ್ ವಿವಿಧ ವೈದಿಕ ವಿದಿ ವಿಧಾನಗಳೊಂದಿಗೆ ಶ್ರೀ ದೇವರಿಗೆ ಬೆಳ್ಳಿಯ ಆಭರಣಗಳನ್ನು ತೊಡಿಸಿದರು.
1 ಕೆಜಿ 474 ಗ್ರಾಂನ ಮುಕುಟ:
ಚೌತಿಯ ದಿನ ಶ್ರೀ ಮಹಾಗಣಪತಿಯನ್ನು ವಿಗೃಹ ಶಿಲ್ಪಿ, ಬ್ಯಾಂಕ್ ಪ್ರಬಂಧಕ ಕೃಷ್ಣ ಪ್ರಸಾದ್ ಸುಬ್ರಹ್ಮಣ್ಯ ಅವರ ಮನೆಯಿಂದ ಮೆರವಣಿಗೆಯಲ್ಲಿ ತರಲಾಯಿತು .ಇದರೊಂದಿಗೆ ನೂತನವಾಗಿ ಅಲಂಕರಿಸಲ್ಪಡುವ ಬೆಳ್ಳಿಯ ಕಿರೀಟ ಮತ್ತು ಪಾಶಾಂಕುಶವನ್ನು ತರಲಾಯಿತು. ಗಣಪತಿ ಪ್ರತಿಷ್ಠೆಯ ಬಳಿಕ ಪುರೋಹಿತರು ವಿವಿಧ ವೈದಿಕ ವಿದಿ ವಿಧಾನಗಳನ್ನು ನೆರವೇರಿಸಿದರು.
ಸಮಿತಿಯ ಅಧ್ಯಕ್ಷ ದಿನೇಶ್ ಮೊಗ್ರ ಮತ್ತು ನಿಕಟಪೂರ್ವಾಧ್ಯಕ್ಷ ದಿನೇಶ್ ಸಂಪ್ಯಾಡಿ ಬ್ರಹ್ಮಾರ್ಪಣೆ ಮಾಡುವ ಮೂಲಕ ಶ್ರೀ ದೇವರಿಗೆ ನೂತನ ಬೆಳ್ಳಿ ಕಿರೀಟ ಮತ್ತು ಬೆಳ್ಳಿಯ ಪಾಶಾಂಕುಶ ಅರ್ಪಣೆ ಮಾಡಿದರು.
ಸುಮಾರು 1 ಕೆ.ಜಿ 475 ಗ್ರಾಂನ ಬೆಳ್ಳಿ ಕಿರೀಟ, 202 ಗ್ರಾಂ ತೂಕದ ಪಾಶ, 191 ಗ್ರಾಂನ ಅಂಕುಶ ಸೇರಿದಂತೆ ಒಟ್ಟು 2 ಲಕ್ಷದ 75 ಸಾವಿರ ಮೌಲ್ಯದ ಬೆಳ್ಳಿಯ ವಸ್ತುಗಳನ್ನು ಪುರೋಹಿತ ರಮಾನಂದ ಭಟ್ ಶ್ರೀ ಮಹಾಣಪತಿಗೆ ತೊಡಿಸಿದರು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ದಿನೇಶ್ ಮೊಗ್ರ, ನಿಕಟಪೂರ್ವಾಧ್ಯಕ್ಷ ದಿನೇಶ್ ಸಂಪ್ಯಾಡಿ, ಸಂಚಾಲಕರುಗಳಾದ ಎ.ವೆಂಕಟ್ರಾಜ್, ಯಜ್ಞೇಶ್ ಆಚಾರ್, ರಾಜೇಶ್ ಎನ್.ಎಸ್, ಮೃಣ್ಮಯ ಮೂರ್ತಿಯ ಶಿಲ್ಪಿ ಕೃಷ್ಣ ಪ್ರಸಾದ್ ಸುಬ್ರಹ್ಮಣ್ಯ, ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ,ಕಾರ್ಯದರ್ಶಿ ದೀಪಕ್ ನಂಬಿಯಾರ್, ಉಪಾಧ್ಯಕ್ಷರಾದ ಯಶೋಧಕೃಷ್ಣ ನೂಚಿಲ, ವಿನ್ಯಾಸ್ ಹೊಸೋಳಿಕೆ, ಭರತ್ ನೆಕ್ರಾಜೆ, ನಿತಿನ್ ಭಟ್, ಮಹೇಶ್ ಗುಡ್ಡೆಮನೆ, ಭಾರತಿ ದಿನೇಶ್, ಪ್ರಧಾನ ಕೋಶಾಧಿಕಾರಿ ಶ್ರೀಕೃಷ್ಣ ಶರ್ಮ, ಕೋಶಾಧಿಕಾರಿ ಹರಿಪ್ರಸಾದ್ ನಾಯರ್ ಮಲ್ಲಾಜೆ, ಜತೆ ಕಾರ್ಯದರ್ಶಿಗಳಾದ ಮನೋಜ್ ಕುಮಾರ್.ಎಸ್, ಜಯರಾಮ ಎಚ್.ಎಲ್, ಸಹಕೋಶಾಧಿಕಾರಿಗಳಾದ ಅಚ್ಚುತ್ತ ಗೌಡ, ಶ್ರೀಕುಮಾರ್ ಬಿಲದ್ವಾರ, ಸುಹಾಸ್ ಎಚ್.ಎಸ್, ದೇವಿ ಚರಣ್ ಕಾನಡ್ಕ, ಪ್ರಮುಖರಾದ ವಿಮಲಾ ರಂಗಯ್ಯ, ಸುಜಾತಾ ಗಣೇಶ್, ರವೀಂದ್ರ.ಕೆ.ಸುಬ್ರಹ್ಮಣ್ಯ,ಉದಯ ಕುಮಾರ್ ನೂಚಿಲ, ಶೇಖರ್ ಕುಕ್ಕೆ, ಪ್ರಶಾಂತ್ ಆಚಾರ್ಯ, ಸುಕೇಶ್ ಸುಧಿ, ಪ್ರಶಾಂತ್ ಮೂಜೂರು, ಸಂಪತ್ ಖಂಡಿಗೆ, ಕಾರ್ತಿಕ್ ವಿದ್ಯಾನಗರ, ಅಶೋಕ್ ಆಚಾರ್ಯ, ಶಿವರಾಮ.ಕೆ, ರಾಧಾಕೃಷ್ಣ ಆರ್ವಾರ, ದೀಪಕ್ ಎಚ್.ಬಿ, ಭರತೇಶ್, ಸುಜಯ್ ಕಲ್ಪಣೆ, ಸುಬ್ರಹ್ಮಣ್ಯ ಮಾನಾಡು ಉಪಸ್ಥಿತರಿದ್ದರು.