Saturday, April 1, 2023

Latest Posts

ವಂಚನೆ ಪ್ರಕರಣ: ಎಂ ಎಲ್ ಸಿ ಆರ್.ಶಂಕರ್ ಪತ್ನಿ, ಪುತ್ರನ ವಿರುದ್ಧ FIR

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ ಎಲ್ ಸಿ ಆರ್.ಶಂಕರ್, ಪುತ್ರ ಸೇರಿದಂತೆ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

ಲೇಔಟ್ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ ಮಾಡಿದ ಅರೋಪದಡಿ ಆರ್.ಶಂಕರ್ ಅವರ ಪತ್ನಿ ಹಾಗೂ ಪುತ್ರರ ವಿರುದ್ಧ ಕಂಪನಿ ಪಾರ್ಟನರ್ ಆಗಿದ್ದ ಪ್ರಭಾವತಿ ಎಂಬುವವರು ಪ್ರಕರಣ ದಾಖಲಿಸಿದ್ದು, ಇಂದಿರಾನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಕಂಪನಿ ಹೆಸರಲ್ಲಿ ಬೊಮ್ಮನಹಳ್ಳಿಯಲ್ಲಿ ಲೇಔಟ್ ನಿರ್ಮಿಸಿದ್ದರು. ಪಾರ್ಟನರ್ ಗೆ ವಂಚಿಸಿ ಆರ್.ಶಂಕರ್ ಪತ್ನಿ, ಪುತ್ರ ಹಾಗೂ ಇನ್ನಿಬ್ಬರು ಸೇರಿ ಒಟ್ಟು ನಾಲ್ವರು 23 ಸೈಟ್ ಗಳನ್ನು ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!