ಆನಂದ ಮಹೀಂದ್ರಾ ಅವರಿಂದ ಹೊಗಳಿಸಿಕೊಂಡ ರಸ್ತೆ ಶಿಸ್ತು, ಇದು ಇನ್ಯಾವುದೇ ದೇಶದ್ದಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ, ಜರ್ಮನಿಯಲ್ಲಿನ ರಸ್ತೆ ಶಿಸ್ತು ನೋಡಿ ಭಾರತೀಯರು ಕಲಿಯಬೇಕು ಅಂತ ಹೇಳ್ತಾರೆ. ಯಾಕಂದ್ರೆ ನಾವೆಲ್ಲಾ ರಸ್ತೆಗೆ ಇಳಿದ್ರೆ ಕೇಳೋದೇ ಹಾರ್ನ್ ಶಬ್ದ, ಮೈ ಮೇಲೆ ಹೋಗುವ ಬೈಕ್ ಗಳು. ಇವರನ್ನೆಲ್ಲಾ ಬೈಯುವುದರಿಂದಲೇ ನಮ್ಮ ರಸ್ತೆ ಪ್ರಯಾಣ ಶುರುವಾಗೋದು.
ಆದರೆ ಆ ರಸ್ತೆ ಶಿಸ್ತು ಅನ್ನೋದು ಕೇವಲ ವಿದೇಶದಲ್ಲಿ ಮಾತ್ರ ಇರೋದು ಅಲ್ಲ, ನಮ್ಮದೇ ದೇಶದ ಮಿಜೊರಾಮ್ ನಲ್ಲೂ ಇದೆ ಅಂತ ಅಲ್ಲಿನ ಮಂದಿ ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ.. ಮಿಜೊರಾಮ್ ಜನರ ಶಿಸ್ತು ನೋಡಿ ಸ್ವತಃ ಆನಂದ್ ಮಹೀಂದ್ರ ಅವರು ಮನಸಾರೆ ಕೊಂಡಾಡಿದ್ದಾರೆ.
ನಮ್ಮ ದೇಶದಲ್ಲೂ ರಸ್ತೆ ಶಿಸ್ತು ಅನ್ನೋದು ರೂಢಿಗೆ ಬರುತ್ತಾ ಅಂತಾ ಕೇಳೋರಿಗೆ ಉತ್ತರಿಸೋಕೆ ಈ ಒಂದು ಫೋಟೋ ಸಾಕು.
ಮಿಜೋರಾಮ್ ನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ನೂರಾರು ಗಾಡಿಗಳು ಸಾಲಾಗಿ ನಿಂತಿವೆ. ಅದು ಮಾತ್ರ ಅಲ್ಲ. ಹೀಗೆ ಸಾಲಾಗಿ ನಿಂತಿರುವ ವಾಹನಗಳ ಚಾಲಕರಾರೊಬ್ಬರೂ ಹಾರ್ನ್ ಮಾಡುತ್ತಿಲ್ಲ ಅಥವಾ ರೋಡ್ ಮಾರ್ಕರ್ ಗೆರೆ ಮೀರಿ ಪಕ್ಕದ ರಸ್ತೆಗೆ ಬಂದಿಲ್ಲ.
ಇದನ್ನು ಗಮನಿಸಿದ ಆನಂದ್ ಮಹೀಂದ್ರ ಅವರು, ಇದು ಎಂತಹ ಸೊಗಸಾದ ಚಿತ್ರ, ಯಾರೋಬ್ಬರೂ ತಮ್ಮ ರಸ್ತೆ ದಾಟಿ ಆಚೆ ಬಂದಿಲ್ಲ. ಇದೊಂದು ಸ್ಫೂರ್ತಿಯೇ ಸರಿ. ಗುಣಮಟ್ಟದ ಜೀವನ ಸಾಗಿಸೋದು ನಮಗೇ ಬಿಟ್ಟದ್ದು, ನಿಯಮಗಳನ್ನು ಫಾಲೋ ಮಾಡಿ. ಮಿಜೊರಾಮ್ ಜನತೆಗೆ ಒಂದು ದೊಡ್ಡ ಸಲ್ಯೂಟ್ ಎಂದು ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!