ಭಾರತದ ಉಕ್ರೇನ್ ಆತಂಕ- ಮಂಗಳವಾರದ ಎರಡು ಬೆಳವಣಿಗೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಂಗಳವಾರ ಕೀವ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಾಜಧಾನಿಯಿಂದ ತುರ್ತಾಗಿ ತೊರೆಯುವಂತೆ ಕೇಳಿಕೊಂಡಿದೆ. ಇತ್ತ ದೆಹಲಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಉಕ್ರೇನ್ ಬಿಕ್ಕಟ್ಟು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉಕ್ರೇನ್‌ನಿಂದ ತಕ್ಷಣ ಹೊರಡಿ: ಭಾರತೀಯ ರಾಯಭಾರ ಕಚೇರಿ ಸಲಹೆ: ಲಭ್ಯವಿರುವ ರೈಲುಗಳು ಅಥವಾ ಇನ್ನಾವುದೇ ವಿಧಾನಗಳ ಮೂಲಕ ಕೀವ್ ಅನ್ನು ತೊರೆಯಲು ನಾಗರಿಕರಿಗೆ ಸಲಹೆ ನೀಡಿದೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ಪ್ರಜೆಗಳು ಇಂದು ತುರ್ತಾಗಿ ಲಭ್ಯವಿರುವ ರೈಲುಗಳ ಮೂಲಕ ಅಥವಾ ಲಭ್ಯವಿರುವ ಇತರ ವಿಧಾನಗಳ ಮೂಲಕ ಕೀವ್‌ನಿಂದ ಹೊರಡಲು ರಾಯಭಾರ ಕಚೇರಿ ತಿಳಿಸಿದೆ.
ಕೀವ್‌ನ ಸುತ್ತಲೂ ರಷ್ಯಾದ ಪಡೆಗಳು ಮತ್ತು ಉಕ್ರೇನ್ ಪಡೆಗಳ ನಡುವೆ ಹೆಚ್ಚುತ್ತಿರುವ ಹೋರಾಟದ ಮಧ್ಯೆ ಈ ಸಲಹೆ ಬಂದಿದೆ.

ರಾಷ್ಟ್ರಪತಿಯವರಿಗೆ ಪ್ರಧಾನಿ ವಿವರಣೆ:
ರಷ್ಯಾದಿಂದ ದಾಳಿಗೊಳಗಾದ ಉಕ್ರೇನ್‌ನಿಂದ ಭಾರತೀಯ ನಾಗರಿಕರನ್ನು, ಬಹುತೇಕ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸರಕಾರ ಆಪರೇಷನ್ ಗಂಗಾ ಆರಂಭಿಸಿದೆ. ಉಕ್ರೇನ್ ಬಿಕ್ಕಟ್ಟು ಮತ್ತು ಆ ದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಕೇಂದ್ರ ಸರಕಾರದ ಪ್ರಯತ್ನಗಳ ಬಗ್ಗೆ ಮೋದಿ ಅವರು ಕೋವಿಂದ್ ಅವರಿಗೆ ವಿವರಿಸಿದರು ಎಂದು ಮೂಲಗಳು ತಿಳಿಸಿವೆ. ತೆರವು ಕಾರ್ಯಾಚರಣೆಯನ್ನು ಸಂಘಟಿಸಲು ಉಕ್ರೇನ್‌ನ ಹಲವಾರು ನೆರೆಯ ದೇಶಗಳಿಗೆ ನಾಲ್ವರು ಸಚಿವರನ್ನು ಕಳುಹಿಸಲು ಕೇಂದ್ರ ಸರಕಾರ ಸೋಮವಾರ ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!