ಅಶ್ವಿನಿ ನಕ್ಷತ್ರದ ಕುರಿತಾದ ಕುತೂಹಲಕಾರಿ ವಿಚಾರಗಳನ್ನು ಗಮನಿಸಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಹಿಂದೂ ಧರ್ಮದ ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳಿಗೆ ಹೆಚ್ಚಿನ ಮಹತ್ವವಿದೆ. ನಾವು ಹುಟ್ಟಿದ ಸಮಯದ ಆಧಾರದ ಮೇಲೆ ನಮ್ಮದು ಯಾವ ನಕ್ಷತ್ರ ಎಂದು ನಿರ್ಧರಿಸಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ ಒಟ್ಟು ಇಪ್ಪತ್ತೇಳು ನಕ್ಷತ್ರಗಳಲ್ಲಿ ಅಶ್ವಿನಿ ನಕ್ಷತ್ರವು ಒಂದು. ಅಶ್ವಿನಿ ನಕ್ಷತ್ರದ ಚಿನ್ಹೆಯಾದ ಕುದುರೆ ಅಪರಿಮಿತ ಶಕ್ತಿಯ ಸಂಕೇತ. ಅದ್ದರಿಂದಲೇ ಅಶ್ವಿನಿ ನಕ್ಷತ್ರದಲ್ಲಿ ಹುಟ್ಟುವ ಮಕ್ಕಳು ಬಾಲ್ಯದಲ್ಲಿ ಬಹಳ ಚೂಟಿಯಾಗಿರುತ್ತಾರೆ. ಎಲ್ಲಾ ವಿಚಾರಗಳಲ್ಲೂ ಅವರು ಮುನ್ನುಗ್ಗುತ್ತಿರುತ್ತಾರೆ, ಆಟ- ಪಾಠ ಸೇರಿದಂತೆ ಎಲ್ಲಾ ಚಟುವಟಿಕೆಗಳಲ್ಲಿಯೂ ಅವರು ಸದಾ ಮುಂದು. ಆದರೆ ಅಚ್ಚರಿಯ ಸಂಗತಿಯೆಂದರೆ ಈ ರಾಶಿಯವರು ತಲೆ ಹಾಗೂ ಮುಖದ ಭಾಗಗಳಲ್ಲಿ ಗಾಯ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಅದರಿಂದಾಗಿಯೇ ಬಹುತೇಕ ಅಶ್ವಿನಿ ನಕ್ಷತ್ರದ ವ್ಯಕ್ತಿಗಳು ಮುಖದ ಮೇಲೆ ಕಲೆಯನ್ನು ಹೊತ್ತಿರುತ್ತಾರೆ. ಅವರ ರಾಶಿಯ ಪ್ರತಿನಿಧಿ ಮೃಗವಾಗಿರುವುದರಿಂದ ಇಂತಹದ್ದೊಂದು ವಿಚಿತ್ರ ಸಂಗತಿ ಘಟಿಸುತ್ತದೆ. ಅಲ್ಲದೆ ಈ ರಾಶಿಯವರಿಗೆ ವಾತ ಸಮಸ್ಯೆಯ ಬಾಧೆಗಳು ಹೆಚ್ಚು. ಅಶ್ವಿನಿ ನಕ್ಷತ್ರದ ಕುರಿತಾದ ಕುತೂಹಲಕಾರಿ ವಿಚಾರಗಳನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಗಮನಿಸಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!