ಈ ಮನೆಯ ಗೋಡೆಗಳೇ ಇದರ ಆಕರ್ಷಣೆ: ಇದನ್ನ ʼಡ್ಯಾನ್ಸಿಂಗ್‌ ವಾಲ್‌ʼ ಅಂತಲೇ ಕರೆಯುತ್ತಾರೆ!

  • ಹಿತೈಷಿ 

ಪರಿಸರ ಪ್ರೇಮಿಗಳಾಗಲು ನಾವು ಕಾಡುಗಳಿಗೆ ಹೋಗಿ ಕಲಿಯಬೇಕೆಂದಿಲ್ಲ. ಸಿಟಿ ಜನರ ನಡುವೆಯೇ ಇದ್ದು, ಸುತ್ತಲಿನ ಪರಿಸರವನ್ನು ಹಸನಾಗಿಸೋದು ಕೂಡ ಪರಿಸರ ಪ್ರೇಮಿಯ ಗುಣ.
ಇಲ್ಲೊಬ್ಬ ಪರಿಸರ ಪ್ರೇಮಿಯ ಪರಿಚಯ ನಿಮಗೆ ಮಾಡಿಸುತ್ತೇನೆ.ಇವರ ಹೆಸರು ವಿನು ಡೇನಿಯಲ್. ಇವರಿಗೆ ವಾಸ್ತುಶಿಲ್ಪಿ ಪಿತಾಮಹ ಎಂದೇ ಖ್ಯಾತರಾಗಿರುವ ಲಾರಿ ಬೇಕರ್ ಸ್ಫೂರ್ತಿ.
ಮಣ್ಣು, ಇಟ್ಟಿಗೆ ಹಾಗೂ ತ್ಯಾಜ್ಯಗಳಿಂದ ಮನೆ ಕಟ್ಟುವ ಅವರ ನಾವೀನ್ಯತೆಯ ತಂತ್ರಗಳನ್ನು ಬಳಸಿಕೊಂಡಿದ್ದಾರೆ.

ಏನು ಈ ಮನೆಯ ವಿಶೇಷತೆ?
ಇದು ಪರಿಸರ ಸ್ನೇಹಿ ಮಾತ್ರವಲ್ಲದೆ ವಿಭಿನ್ನ ರೀತಿಯ ಪಿರೋಯೆಟ್ ಹೌಸ್ ಇದರ ಪ್ರಮುಖ ಆಕರ್ಷಣೆಯಾಗಿದೆ.

Pirouette House / Wallmakers - Opera News

ಪಿರೋಯೆಟ್ ಹೌಸ್ ಅಂದರೆ ಏನು?
ಈ ಮನೆ ನಿರ್ಮಾಣಕ್ಕೆ ಮಣ್ಣು, ಇಟ್ಟಿಗೆ ಹಾಗೂ ತ್ಯಾಜ್ಯ ಬಳಸಲಾಗುತ್ತದೆ. ಆದರೆ ಜೋಡಿಸುವ ಇಟ್ಟಿಗೆಗಳು ಮಾತ್ರ ವಿಭಿನ್ನ. ಅಂದ್ರೆ crisscross ಆಕಾರದಲ್ಲಿ ಜೋಡಿಸಲಾಗುತ್ತದೆ. ಇಟ್ಟಿಗೆಗಳನ್ನು ಅಡ್ಡಲಾಗಿ ಇಡುವ ಬದಲು ಉದ್ದಕ್ಕೆ ಜೋಡಿಸಲಾಗುತ್ತದೆ.  ಅದಕ್ಕೆ ಮನೆಯ ಗೋಡೆಗಳು ಡ್ಯಾನ್ಸ್ ಮಾಡುತ್ತಿರುವಂತೆ ಕಾಣುತ್ತೆ.

ಏನಿದರ ವಿಶೇಷತೆ?
ಈ ಮನೆಯ ವಿಶೇಷ ವಿನ್ಯಾಸದಿಂದ ಮನೆಯಲ್ಲಿ AC ಹಾಗೂ ಲೈಟ್ ಗಳ ಬಳಕೆ ಕಡಿಮೆ ಮಾಡುತ್ತೆ. ಅಂದ್ರೆ ಇಲ್ಲಿ ನಮಗೆ ಸಿಗೋದು ನೈಸರ್ಗಿಕ ಬೆಳಕು ಹಾಗೂ ಗಾಳಿ.

Pirouette House / Wallmakers | ArchDaily

ಎಲ್ಲಿ ನಿರ್ಮಾಣ ಮಾಡಬಹುದು ಈ ಮನೆ?
ಈ ಮನೆ ಕಟ್ಟೋಕೆ ನೀವು ಕಾಡಿಗೆ ಹೋಗಬೇಕಾಗಿಲ್ಲ, ಜನನಿಬಿಡದ ಪ್ರದೇಶದಲ್ಲೂ ನಿರ್ಮಾಣ ಮಾಡಬಹುದು ಈ ಪಿರೋಯೆಟ್ ಹೌಸ್. ಈ ಮನೆಯ ಸುತ್ತ ನೀವು ಮರಗಿಡಗಳನ್ನು ಬೆಳಸಿಕೊಳ್ಳಬಹುದು. ಈಗ ಈ ಸ್ಟೋರಿಯಲ್ಲಿರುವ ಮನೆ ಕೂಡ ಇರೋದು ತಿರುವನಂತಪುರದ ಜನನಿಬಿಡ ಪ್ರದೇಶದಲ್ಲಿ. ಈ ಮನೆಗೆ ಯಾವುದೇ ವಿದ್ಯುತ್‌ ಅಲಂಕಾರ ಬೇಕಿಲ್ಲ, ಗಾಳಿಗೆ ಫ್ಯಾನ್‌ ಬೇಕಿಲ್ಲ.. ಎಲ್ಲವೂ ತಾನಾಗಿಯೇ ಬರುತ್ತೆ.

Pirouette House / Wallmakers | ArchDaily

ಹಾಗಾದರೆ ಈ ಮನೆಯ ಸೆಕ್ಯುರಿಟಿ, ಜನರ ಖಾಸಗಿ ಜೀವನ ಹೇಗೆ?
ಚಿಂತೆ ಬೇಡ. ಈ ಮನೆಯ ಗೋಡೆಗಳು ಮಾತ್ರ ಡ್ಯಾನ್ಸ್‌ ಮಾಡುವಂತೆ ಕಾಣುತ್ತದೆ. ಆದರೆ ಒಳಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.. ಎಲ್ಲವೂ ಕ್ಲೋಸ್ಡ್‌ ಆಗಿರುತ್ತದೆ. ದೊಡ್ಡ ಕಿಟಕಿಗಳಿಗೆ ಕಬ್ಬಿನ ನಾರಿನಿಂದ ಪರದೆ, ಮೆಟ್ಟಿಲುಗಳಿಗೆ ಗ್ರಿಲ್‌ ವರ್ಕ್‌ ಕೂಡ ಮಾಡಲಾಗುತ್ತದೆ.
ಇದು ರಚನಾತ್ಮಕವಾಗಿದ್ದು, ಎಲ್ಲದರಲ್ಲೂ ಪ್ರಕೃತಿ ಸೌಂದರ್ಯವನ್ನೇ ಸಾಧನವಾಗಿಸಿಕೊಂಡು ಬರಲಾಗಿದೆ.

ಈ ಮನೆಯಿಂದ ಏನು ಲಾಭ?
ಈ ಮನೆ ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದ್ದು, ಸಿಮೆಂಟ್‌ ಬಳಕೆಯನ್ನು ಶೇ.40ರಷ್ಟು ಕಡಿಮೆ ಮಾಡುವುದಲ್ಲದೆ, ಶೇ.30ರಷ್ಟು ಉಕ್ಕು ಬಳಕೆ ಕೂಡ ಕಡಿಮೆಯಾಗಲಿದೆ. ಜತೆಗೆ ಇವು ಎಲ್ಲಾ ಕಟ್ಟಡ ನಿರ್ಮಾಣದ ಇತರ ವಸ್ತುಗಳಿಗಿಂತ ಬಲವಾಗಿರಲಿದೆ ಎಂದು ವಿನು ವಿವರಿಸುತ್ತಾರೆ.
ಈ ಮನೆ ನಿರ್ಮಿಸಿರುವ ರ್ಯಾಟ್ ಟ್ರ್ಯಾಪ್ ಮ್ಯಾಸನ್ರಿ ವಿಧಾನದಲ್ಲಿ ಗೋಡೆಗಳು ಉಷ್ಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ, ಚಳಿಗಾಲದಲ್ಲಿ ಉಷ್ಣತೆ ಮತ್ತು ಬೇಸಿಗೆಯಲ್ಲಿ ತಂಪಾದ ಗಾಳಿ ಒದಗಿಸುತ್ತವೆ.

ಮತ್ತೊಂದು ವಿಶೇಷ:
ಈ ಮನೆ ನಿರ್ಮಾಣಕ್ಕೆ ಕೇವಲ ಮಣ್ಣು, ಇಟ್ಟಿಗೆಗಳು ಮಾತ್ರವಲ್ಲದೆ ಮರುಬಳಕೆ ಮಾಡಬಹುದಾದ ಬಾಟಲಿಗಳು, ಸ್ಕ್ರ್ಯಾಪ್ ಲೋಹಗಳು, ತೆಂಗಿನ ಚಿಪ್ಪುಗಳು ಮತ್ತು ಇಟ್ಟಿಗೆಗಳನ್ನು ಬಳಸಲಾಗುತ್ತದೆ.
ಅಷ್ಟೇ ಅಲ್ಲಾ ಆಧುನಿಕ ವಿನ್ಯಾಸಗಳನ್ನು ಆವಿಷ್ಕರಿಸುವವರೆಗೆ ಮತ್ತು ನಿರ್ಮಾಣದ ಸಮಯದಲ್ಲಿ ಇಂಗಾಲ ಕಡಿಮೆ ಮಾಡಲು ಇಚ್ಛಿಸುವವರಿಗೆ ಈ ಮನೆ ಸೂಕ್ತ.


ಎಲ್ಲೋ ನಿರ್ಜನ ಪ್ರದೇಶಕ್ಕೆ ಹೋಗಿ, ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಮನೆಯಲ್ಲಿ ಕೇವಲ ಒಂದು ದಿನ ಬಾಡಿಗೆಗೆ ಇರುವ ಬದಲು ಜೀವನದಲ್ಲಿ ಒಮ್ಮೆ ಈ ರೀತಿಯ ಮನೆ ನಿರ್ಮಿಸಿಕೊಳ್ಳೋಣ ಅಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!