ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಾಣಿಗಳು ಏನೇ ಗಲಾಟೆ ಮಾಡಿದರೂ ನೋಡೋಕೆ ಚಂದ. ಅದರಲ್ಲಂತೂ ಅವುಗಳ ಫೈಟಿಂಗ್ ಸೀನ್ ನೋಡೋಕೆ ನೆಟ್ಟಿಗರು ಕಾಯ್ತಿರ್ತಾರೆ. ಈಗ ಅಂತಹದ್ದೇ ಒಂದು ವಿಡಿಯೋ ಇನ್ ಸ್ಟಾಗ್ರಾಂ ನಲ್ಲಿ ಹರಿದಾಡುತ್ತಿದೆ.
ಏನಿದೆ ಈ ವಿಡಿಯೋದಲ್ಲಿ?
ಕಂಬಕ್ಕೆ ಸುತ್ತುಕೊಂಡಿದ್ದ ಹಾವನ್ನು ಒಂದು ಬೆಕ್ಕು ಚೇಷ್ಟೆ ಮಾಡಿ ಎಬ್ಬಿಸುತ್ತದೆ. ಹಾವಿಗೆ ಚೆನ್ನಾಗಿ ಹೊಡೆಯುತ್ತಾ ಅದನ್ನು ಬಾಯೊಳಗೆ ಹಾಕಿ ಆಡಿಸುತ್ತೆ ಬೆಕ್ಕು. ಆದರೆ ಕ್ಷಣಾರ್ಧದಲ್ಲಿ ಹಾವು ಬೆಕ್ಕಿನ ಮೈತುಂಬಾ ಸುತ್ತಿಕೊಳ್ಳುತ್ತದೆ. ಇದರಿಂದ ಬೆಕ್ಕು ವಿಲವಿಲ ಒದ್ದಾಡಿ ಹೈ ಜಂಪ್ ಮಾಡುತ್ತೆ. ಕೊನೆಯಲ್ಲಿ ಹಾವನ್ನು ನೆಲಕ್ಕೆ ಬಿಟ್ಟು ಬೆಕ್ಕು ಬಚಾವ್ ಆಗುತ್ತೆ.