ಚಿರತೆ ಮತ್ತು ಆಮೆಯ ಸ್ನೇಹ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್: ಅಚ್ಚರಿಗೆ ಕಾರಣವಾದ ದೃಶ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ನೇಹ ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮುಖ್ಯವಾದ ಅಂಶ. ಅನೇಕ ಏಳು-ಬೀಳಿಗೆ ಒಮ್ಮೊಮ್ಮೆ ಸ್ನೇಹಿತರೂ ಮುಖ್ಯ ಆಗ್ತಾರೆ. ಎಂಥವರು ಬದುಕಲ್ಲಿ ಇರುತ್ತಾರೆ ಅನ್ನೋದಷ್ಟೇ ಮುಖ್ಯ ಇಲ್ಲಿ. ಮನುಷ್ಯರಿಗೇನು ಪ್ರಾಣಿಗಳಿಗೂ ಸ್ನೇಹಿತರಿರ್ತಾರೆ ಕಣ್ರೀ…ಕೆಲವು ಪ್ರಾಣಿಗಳು ಸ್ನೇಹಿತರಾಗುವುದನ್ನು ನಾವು ಅಪರೂಪ ಉದಾಹರಣೆಗೆ…ನಾಯಿ-ಬೆಕ್ಕಿನ ತರ. ಒಂದಕ್ಕೊಂದು ಬದ್ದ ವೈರಿಗಳೂ ಸಹ ಸ್ನೇಹ ಬೆಳೆಸುತ್ತವೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಚಿರತೆ ಹಾಗೂ ಆಮೆಯ ಸ್ನೇಹ ಕಾಣಬಹುದು. ಈ ವೀಡಿಯೋ ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಈ ವಿಡಿಯೋದಲ್ಲಿ ಚಿರತೆಯೊಂದು ಆಮೆಯ ಚಿಪ್ಪಿನ ಮೇಲೆ ತನ್ನ ತಲೆಯನ್ನು ಉಜ್ಜಿಕೊಂಡು ಆಟವಾಡುತ್ತಿರುವುದನ್ನು ಕಾಣಬಹುದು. ಆಮೆ ಕೂಡ ಹುಲ್ಲಿನ ಮೇಲೆ ಮುದ್ದು ಮುದ್ದಾಗಿ ಮಲಗಿದೆ. ಕಾರ್ಸನ್ ಸ್ಪ್ರಿಂಗ್ಸ್ ವೈಲ್ಡ್‌ಲೈಫ್ ಕಳೆದ ವಾರ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ವೀಡಿಯೊ 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. 56,000ಕ್ಕೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!