ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ರಾಜ್ಕೋಟ್ ಜಿಲ್ಲೆಯ ಶಾಸ್ತ್ರಿ ನಗರ ಪ್ರದೇಶದ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದೆ.
ವರದಿಯ ಪ್ರಕಾರ, ಮನೆಯೊಳಗಿದ್ದ ಕೆಲವು ರಾಸಾಯನಿಕ ಬಾಟಲಿಗಳು ಸ್ಫೋಟಗೊಂಡ ಪರಿಣಾಮವಾಗಿ ಬೆಂಕಿ ಹೊತ್ತುಕೊಂಡಿರುವುದಾಗಿ ಅಧಿಕಾರಿಗಲ ಗಮನಕ್ಕೆ ಬಂದಿದೆ.
ವಿಷಯ ಗೊತ್ತಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ವಾಹನಗಳ ಸಹಿತ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ಆಋಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿ ಇನ್ನೂ ಹತೋಟಿಗೆ ಬಂದಿಲ್ಲ. ಯಾವುದೇ ಸಾವು-ನೋವಿನ ಬಗ್ಗೆಯೂ ಈವರೆಗೂ ವರದಿಯಾಗಿಲ್ಲ.
ಘಟನೆಯ ಸಮಯ ಇನ್ನೂ ಖಚಿತವಾಗಿಲ್ಲ. ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.