‘ನಿಮ್ಮ ಜೊತೆ ನಾವಿದ್ದೇವೆ’ ಪ್ರವಾಹ ಪೀಡಿತ ಲಿಬಿಯಾಗೆ ಭಾರತ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಿಬಿಯಾದಲ್ಲಿ ಭೀಕರ ಪ್ರವಾಹ ಎದುರಾಗಿದ್ದು, ಕನಿಷ್ಟ ಐದು ಸಾವಿರ ಮಂದಿ ಮೃತಪಟ್ಟಿದ್ದಾರೆ. 10 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಯಾರ ಸುಳಿವೂ ಸಿಕ್ಕಿಲ್ಲ. ಲಿಬಿಯಾ ಪ್ರವಾಹದಲ್ಲಿ ಮೃತಪಟ್ಟವರಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂತಾಪ ಸೂಚಿಸಿದ್ದಾರೆ.

Libya flood: Before and after pictures show devastation | World News | Sky News ಲಿಬಿಯಾ ಪ್ರವಾಹದಿಂದ ಆದ ಹಾನಿಯಿಂದ ತೀವ್ರ ದುಃಖವಾಗಿದೆ. ಸಂತ್ರಸ್ತರ ಕುಟುಂಬ ಹಾಗೂ ದುರಂತದಿಂದ ಸಂತ್ರಸ್ತರಾದ ಎಲ್ಲರೊಂದಿಗೆ ನಮ್ಮ ಸಹಾನುಭೂತಿ ಇದೆ. ಈ ಕಷ್ಟದ ಸಮಯದಲ್ಲಿ ನಾವಿದ್ದೇವೆ ಎಂದಿದ್ದಾರೆ.

Floods in Libya: the prime minister of Cyrenaica announces over two thousand dead and thousands missing - videoಧಾರಾಕಾರ ಮಳೆಯಿಂದಾಗಿ ಲಿಬಿಯಾದ ಎರಡು ಡ್ಯಾಂ ಒಡೆದು ಹೋಗಿದ್ದು, ಅಣೆಕಟ್ಟು ಒಡೆದು ಡರ್ನಾ ನಗರಕ್ಕೆ ನೀರು ನುಗ್ಗಿದೆ. 125,000 ನಿವಾಸಿಗಳಿರುವ ಡರ್ನಾ ನಗರ ಅಕ್ಷರಶಃ ಕೊಚ್ಚಿಹೋಗಿದೆ.

Sea is constantly dumping bodies': fears Libya flood death toll may hit 20,000 | Libya flood (2023) | The Guardianದೊಡ್ಡ ಕಟ್ಟಡಗಳು ಕುಸಿದುಬಿದ್ದಿವೆ, ರಸ್ತೆ ತುಂಬಾ ಕಲ್ಲು ಮಣ್ಣು ತುಂಬಿದೆ. ಈಗಾಗಲೇ 5,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕಟ್ಟಡಗಳನ್ನು ತೆರವು ಮಾಡುತ್ತಿದ್ದಂತೆ ಮೃತದೇಹಗಳು ಸಿಗುತ್ತಲೇ ಇವೆ. ಪ್ರವಾಹದ ಸಂತ್ರಸ್ತರಿಗೆ ಸಹಾಯ ಮಾಡುವಾಗ ಮೂವರು ಐಎಫ್‌ಆರ್‌ಸಿ ಸ್ವಯಂ ಸೇವಕರು ಮೃತಪಟ್ಟಿದ್ದಾರೆ. ಒಟ್ಟಾರೆ 30,000 ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!