ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್ ಸ್ಫೋಟ (Bomb Blast) ಪ್ರಕರಣ ಸಂಬಂಧ ಸ್ಥಳ ಪರಿಶೀಲನೆ ಮುಂದುವರಿದಿದ್ದು, ಈಗಾಗಲೇ ಸ್ಫೋಟಗೊಂಡ ಸ್ಥಳದಲ್ಲಿ ಬ್ಯಾಟರಿ ಜೊತೆಗೆ ಟೈಮರ್ ಪತ್ತೆಯಾಗಿತ್ತು. ಇದೀಗ, ಟೈಮರ್ ಫಿಕ್ಸ್ ಮಾಡಿ ಸ್ಪೋಟಿಸಲು ಬಳಿಸಿದ್ದ ರಾಸಾಯನಿಕಗಳು ಪತ್ತೆಯಾಗಿವೆ.
ಪೊಟ್ಯಾಷಿಯಂ ನೈಟ್ರೇಟ್ ಮತ್ತು ಹೈಡ್ರೋಜನ್ ಪರಾಕ್ಸೈಡ್ ಬಳಸಿ ಕೃತ್ಯ ಎಸಗಲಾಗಿದೆ. ಟೈಮರ್ ಫಿಕ್ಸ್ ಮಾಡಿ ಸ್ಪೋಟಿಸಲು ಈ ರಾಸಾಯನಿಕಗಳನ್ನು ಬಳಕೆ ಮಾಡಲಾಗಿದೆ. ಸದ್ಯ, ಸ್ಫೋಟದ ಅವಶೇಷಗಳ ಮಾದರಿಗಳನ್ನು ಎಫ್ಎಸ್ಎಲ್ ಮತ್ತು ಸೋಕೋ ಟೀಂ ಸಂಗ್ರಹಿಸಿದೆ.
ಸ್ಫೋಟಗೊಂಡ ಸ್ಥಳದಲ್ಲಿ ಈಗಾಗಲೇ ಬ್ಯಾಟರಿ, ಟೈಮರ್ ಪತ್ತೆಯಾಗಿದೆ. ಹೀಗಾಗಿ ಟೈಮರ್ ಇಟ್ಟು ಬಾಂಬ್ ಸ್ಫೋಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಾಂಬ್ಗೆ ಟೈಮರ್ ಫಿಕ್ಸ್ ಮಾಡಿ ಬ್ಯಾಗಿನ ಒಳಗೆ ಇಟ್ಟು ಸ್ಫೋಟಿಸಲಾಗಿದೆ ಮಾಡಲಾಗಿದೆ ಎಂಬ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.