‘ದೇಶ ಕಟ್ಟಲು ದೇಣಿಗೆ’ ಅಭಿಯಾನ: ಬಿಜೆಪಿ ಪಕ್ಷ ನಿಧಿಗೆ 2 ಸಾವಿರ ಡೋನೇಶನ್ ನೀಡಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಗೆ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿದೆ. ಚುನಾವಣೆ ಖರ್ಚು ವೆಚ್ಚಕ್ಕೆ ಹಣ ಹೊಂದಿಸಲು ಬಿಜೆಪಿ ದೇಣಿಗೆ ಆರಂಭಿಸಿದೆ.

‘ದೇಶ ಕಟ್ಟಲು ದೇಣಿಗೆ’ ಅನ್ನೋ ಸಂದೇಶದೊಂದಿಗೆ ಬಿಜೆಪಿ ಡೋನೇಶನ್ ಅಭಿಯಾನ ಆರಂಭಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪಕ್ಷ ನಿಧಿಗೆ 2,000 ರೂಪಾಯಿ ದೇಣಿಗೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮೋದಿ, ‘ದೇಶ ಕಟ್ಟಲು ದೇಣಿಗೆ ನೀಡಿ’ ಎಂದು ಮನವಿ ಮಾಡಿದ್ದಾರೆ.

ಮಾರ್ಚ್ 1ರಂದು ಬಿಜೆಪಿ ‘ದೇಶ ಕಟ್ಟಲು ದೇಣಿಗೆ’ ಅನ್ನೋ ಅಭಿಯಾನ ಆರಂಭಿಸಿದೆ. ಈ ಮೂಲಕ ದೇಶದ ಮೂಲ ಮೂಲೆಯಿಂದ ದೇಣಿಗೆ ಸಂಗ್ರಹಿಸಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಮಾರ್ಚ್ 1ರಂದು ಈ ಅಭಿಯಾನ ಆರಂಭಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 1,000 ರೂಪಾಯಿ ದೇಣಿಗೆ ನೀಡಿದ್ದರು. ಇದೀಗ ಮೋದಿ 2,000 ರೂಪಾಯಿ ದೇಣಿಗೆ ನೀಡಿದ್ದಾರೆ.

2022-23ರ ಸಾಲಿನಲ್ಲಿ ಬಿಜೆಪಿ 719 ಕೋಟಿ ರೂಪಾಯಿಗಳನ್ನು ದೇಣಿಗೆ ಮೂಲಕ ಸಂಗ್ರಹಿಸಿದೆ. ಇದು 2021-22ರ ಸಾಲಿಗೆ ಹೋಲಿಸಿದರೆ ಶೇಕಡಾ 17 ರಷ್ಟು ಏರಿಕೆಯಾಗಿದೆ. 2021-22ರ ಸಾಲಿನಲ್ಲಿ 614 ಕೋಟಿ ರೂಪಾಯಿಯನ್ನು ಬಿಜೆಪಿ ದೇಣಿಗೆ ಮೂಲಕ ಸಂಗ್ರಹಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!