ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಚೆನ್ನೈ- ಗುಜರಾತ್ ಮುಖಾಮುಖಿ: ಗೆದ್ದ ಟೀಮ್ ಫೈನಲ್ ನತ್ತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಾಲಿ ಚಾಂಪಿಯನ್ ಹಾಗೂ ಮಾಜಿ ಚಾಂಪಿಯನ್ ನಡುವೆ ಇಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಗುಜರಾತ್ ತಂಡ ಒಂದು ಬದಲಾವಣೆ ಮಾಡಿದೆ. ಯಶ್ ದಯಾಳ್ ಬದಲು ದರ್ಶನ್ ನಲ್ಕಂಡೆ ತಂಡ ಸೇರಿಕೊಂಡಿದ್ದಾರೆ. ಚೆನ್ನೈ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಪ್ಲೇ ಆಫ್ ಸುತ್ತಿನ ಪಂದ್ಯಗಳು ಆರಂಭಗೊಂಡಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಸಲಿದೆ. ಇಲ್ಲಿ ಸೋತ ತಂಡಕ್ಕೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶವಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಹೋರಾಡಿ ಫೈನಲ್ ಪ್ರವೇಶಿಸಬಹುದು. ಹೀಗಾಗಿ ಫೈನಲ್ ಪ್ರವೇಶಕ್ಕೆ ಸಿಎಸ್‌ಕೆ ಹಾಗೂ ಗುಜರಾತ್ ಟೈಟಾನ್ಸ್ ಜಿದ್ದಾಜಿದ್ದಿನ ಹೋರಾಟ ನೀಡಲಿದೆ.

ಮೇ.24 ರಂದು ಎಲಿಮಿನೇಟರ್ ಸುತ್ತಿನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!