ಐಪಿಎಲ್-2023 | ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ಐಪಿಎಲ್ 16ನೇ ಸೀಸನ್‌ನ ಫೈನಲ್ ಪಂದ್ಯ ನಡೆದಿದ್ದು, ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.

ಐಪಿಎಲ್‌ನಲ್ಲಿ ಐದನೇ ಬಾರಿ ಟ್ರೋಫಿ ಗೆದ್ದ ಎರಡನೇ ತಂಡ ಇದಾಗಿದ್ದು, ಈ ಹಿಂದೆ ಮುಂಬೈ ಇಂಡಿಯನ್ಸ್ ಐದು ಬಾರಿ ಚಾಂಪಿಯನ್ ಆಗಿತ್ತು. ಧೋನಿ ಪಡೆ ಗೆಲುವಿನ ನಗೆ ಬೀರಿದ್ದು, ರೋಚಕ ಪಂದ್ಯ ವೀಕ್ಷಿಸಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಚಾಂಪಿಯನ್ಸ್ ಎನಿಸಿಕೊಂಡಿರುವ ಸಿಎಸ್‌ಕೆಗೆ ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ರನ್ನರ್ ಅಪ್ ಆದ ಗುಜರಾತ್ ಟೈಟಾನ್ಸ್ ತಂಡ 12.5 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ.

ಮೊನ್ನೆಯೇ ಫೈನಲ್ ಪಂದ್ಯ ನಡೆಯಬೇಕಿದ್ದು, ಮಳೆಯ ಕಾರಣದಿಂದ ಪಂದ್ಯವನ್ನು ನಿನ್ನೆಗೆ ದೂಡಲಾಗಿತ್ತು. ನಿನ್ನೆ ಕೂಡ ಮಳೆಯಿಂದ ಪಂದ್ಯ ರದ್ದಾಗಿದ್ದರೆ, ಪಾಯಿಂಟ್ ಟೇಬಲ್‌ನಲ್ಲಿ ಮುಂದಿರುವ ಜಿಟಿ ಗೆಲುವು ಸಾಧಿಸುತ್ತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!