ಚೆಕ್​ಬೌನ್ಸ್ ಕೇಸ್: ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹೋದರ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರೆ ಸೆಹ್ವಾಗ್ ಅವರ ಸಹೋದರ ವಿನೋದ್ ಸೆಹ್ವಾಗರನ್ನು ಚಂಡಿಗಢ ಪೊಲೀಸರು ಬಂಧಿಸಿದ್ದಾರೆ.

ಎರಡು ವರ್ಷದ ಹಿಂದೆ ನೀಡಿದ್ದ ಚೆಕ್​ಬೌನ್ಸ್​ ಪ್ರಕರಣದಲ್ಲಿ ವಿನೋದ್ ಸೆಹ್ವಾಗರ ಬಂಧನವಾಗಿದೆ.

ನ್ಯಾಯಲಯದಲ್ಲಿ ಜಾಮೀನಿನ ವಿಚಾರವಾಗಿ ಮಾತನಾಡಿದ ಪೊಲೀಸರು, ಈಗಾಗಲೇ ವಿನೋದ್​ ಸೆಹ್ವಾಗ್​ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮತ್ತೆ ಅದೇ ಅಪರಾಧವನ್ನು ಮಾಡಿದ್ದಾರೆ ಎಂದು ಆರೋಪಿಸಿದೆ. ಸದ್ಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಮಾರ್ಚ್​ 10ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದು ಸದ್ಯ ಸೆಹ್ವಾಗರ ಸಹೋದರ ಪೊಲೀಸ್ ಬಂಧನದಲ್ಲಿಯೇ ಇದ್ದಾರೆ.

ವಿನೋದ್ ಮತ್ತು ಅವರೊಂದಿಗಿನ ಇಬ್ಬರು ಸಹಚರರು M/s Xalta Food Beverages Private Limitedನ ನಿರ್ದೇಶಕರಾಗಿದ್ದರು. ಈ ಒಂದು ಕಂಪನಿ ವಿರುದ್ಧ ಐಪಿಸಿ ಸೆಕ್ಷನ್ 174-A ಅಡಿಯಲ್ಲಿ ಕೇಸ್​ ಬುಕ್ ಆಗಿತ್ತು. ಮನಿಮಾಜ್ರೊ ಪೊಲೀಸ್ ಸ್ಟೇಷನ್​ನಲ್ಲಿ 2023ರಲ್ಲಿ ಪ್ರಕರಣದ ದಾಖಲಾಗಿತ್ತು

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!