ಮಾ.25 ರಿಂದ ‘ಚೇರಳ ಗೌಡ ಕಪ್’ ಫುಟ್ಬಾಲ್ ಪಂದ್ಯಾವಳಿ

ದಿಗಂತ ವರದಿ ಮಡಿಕೇರಿ:

ಚೆಟ್ಟಳ್ಳಿಯ ಚೇರಳ ಗೌಡ ಸಂಘದ ವತಿಯಿಂದ ಗೌಡ ಕುಟುಂಬಗಳ ನಡುವೆ ಮಾ.25, 26 ಹಾಗೂ 27 ರಂದು ಚೆಟ್ಟಳ್ಳಿ ಪ್ರೌಢ ಶಾಲಾ ಮೈದಾನದಲ್ಲಿ ‘ಚೇರಳ ಗೌಡ ಕಪ್’ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌಡ ಕುಟುಂಬಗಳ ನಡುವೆ ಮೂರು ದಿನಗಳ ಕಾಲ 5+2 ಆಟಗಾರರ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದೆ. ಪ್ರಥಮ ಸ್ಥಾನ ಪಡೆದ ತಂಡಕ್ಕೆ 22,222 ರೂ., ದ್ವೀತಿಯ ಸ್ಥಾನ ಪಡೆದ ತಂಡಕ್ಕೆ 15,555 ರೂ., ತೃತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ರೂ. ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ರೂ.5,555 ನಗದು ಬಹುಮಾನಗಳೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದೆಂದರು.
ಭಾಗವಹಿಸುವ ತಂಡಗಳು ಮಾ.18ರ ಒಳಗೆ ತಂಡದ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಯುವ ಬ್ರಿಗೇಡ್ ಸಮಿತಿಯ ಕಾರ್ಯದರ್ಶಿ ಪೇರಿಯನ ಉದಯ ಮಾತನಾಡಿ, ಸಂಘದ ಯುವ ಬ್ರಿಗೇಡ್ ಸಮಿತಿ ಮತ್ತು ಕ್ರೀಡಾ ಸಮಿತಿ ಫುಟ್ಬಾಲ್ ಪಂದ್ಯಾವಳಿ ಆಯೋಜನೆಯ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಪ್ರತಿ ತಂಡಕ್ಕೆ ನೀಡಲಾಗುವ ನಿಯಮ ಮತ್ತು ನಿಬಂಧನೆಗೊಳಪಟ್ಟು ಎಲ್ಲಾ ತಂಡಗಳು ಭಾಗವಹಿಸಬೇಕಾಗುತ್ತದೆ. ತಕರಾರುಗಳಿದ್ದಲ್ಲಿ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ 9901237900, 8197297516, 9481946076 ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಅಜೀರ ಧನಂಜಯ, ಖಜಾಂಚಿ ಮುಕ್ಕಟಿ ಪಳಂಗಪ್ಪ, ಯುವ ಬ್ರಿಗೇಡ್‍ನ ಖಜಾಂಚಿ ಮರದಾಳು ತೇಜಸ್ ಹಾಗೂ ಸದಸ್ಯ ಚೇತನ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!