ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಲ್ಡ್ ಚೆಸ್ ಚಾಂಪಿಯನ್ ಡಿ. ಗುಕೇಶ್ ಕುಟುಂಬ ಸಮೇತರಾಗಿ ತಿರುಪತಿಗೆ ಆಗಮಿಸಿದ್ದು,ತಿಮ್ಮಪ್ಪನ ದರುಶನ ಪಡೆದಿದ್ದಾರೆ. ಇದರ ನಂತರ ದೇವರಿಗೆ ಮುಡಿ ನೀಡಿದ್ದಾರೆ.
ನಾನು ಕಷ್ಟಪಟ್ಟು ಕೆಲಸ ಮಾಡುತ್ತಲೇ ಇರಬೇಕು. 2025ರಲ್ಲಿ ಸಾಕಷ್ಟು ಪ್ರಮುಖ ಚೆಸ್ ಪಂದ್ಯಾವಳಿಗಳಿವೆ. ಆದ್ದರಿಂದ ನಾನು ಅದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದ್ದೇನೆ. ನಾನು ಎಲ್ಲಾ ಸ್ವರೂಪಗಳಲ್ಲಿಯೂ ಸುಧಾರಿಸಲು ಬಯಸುತ್ತೇನೆ, ಮತ್ತು ದೇವರ ಕೃಪೆಯಿಂದ ಎಲ್ಲಾ ಒಳ್ಳೆಯದೇ ಆಗುತ್ತೆ ಎಂದು ಭಾವಿಸುತ್ತೇನೆ ಎಂದು ಗುಕೇಶ್ ಹೇಳಿದ್ದಾರೆ.