Chess Olympiad | ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪುರುಷ- ಮಹಿಳಾ ಟೀಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬುಡಾಪೆಸ್ಟ್‌ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವು ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ಬೀಗಿದೆ.

ಅಂತಿಮ ಸುತ್ತಿನಲ್ಲಿ ಭಾರತದ ಪುರುಷರ ತಂಡದ ಡಿ.ಗುಕೇಶ್, ಆರ್.ಪ್ರಜ್ಞಾನಂದ, ಅರ್ಜುನ್ ಎರಿಗೈಸಿ, ವಿದಿತ್ ಗುಜರಾತಿ ಮತ್ತು ಪೆಂಟಾಲ ಹರಿಕೃಷ್ಣ ಅವರು ಸ್ಲೊವೇನಿಯಾ ವಿರುದ್ಧ ಮಿಂಚುವ ಮೂಲಕ ಚಿನ್ನದ ಪದಕವನ್ನು ಪಡೆದರು.

ಡಿ.ಗುಕೇಶ್ ಮತ್ತು ಅರ್ಜುನ್ ಎರಿಗೈಸಿ ಅವರ ಗೆಲುವು ಭಾರತಕ್ಕೆ 2-0 ಮುನ್ನಡೆ ತಂದು ಚಿನ್ನದ ಪದಕವನ್ನು ಖಚಿತಪಡಿಸಿತು. ನಂತರದ ಅಂತಿಮ ಸುತ್ತಿನಲ್ಲಿ, ಪ್ರಜ್ಞಾನಂದ ಅವರ ಆಟವನ್ನು ಗೆದ್ದರು. ಭಾರತ ಸ್ಲೊವೇನಿಯಾವನ್ನು 3.5-0.5 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು.

ಹರಿಕಾ ದ್ರೋಣವಲ್ಲಿ, ಆರ್.ವೈಶಾಲಿ, ದಿವ್ಯಾ ದೇಶಮುಖ್, ವಾಂತಿಕಾ ಅಗರ್ವಾಲ್ ಮತ್ತು ತಾನಿಯಾ ಸಚ್‌ದೇವ್ ಅವರಿದ್ದ ಭಾರತದ ಮಹಿಳಾ ಚೆಸ್ ತಂಡವು ಅಜರ್‌ಬೈಜಾನ್‌ನನ್ನು 3.5-0.5 ರಿಂದ ಸೋಲಿಸಿ ಚಿನ್ನ ಗೆದ್ದಿತು.

ಹರಿಕಾ ದ್ರೋಣವಲ್ಲಿ, ದಿವ್ಯಾ ದೇಶಮುಖ್ ಮತ್ತು ವಂತಿಕಾ ಅಗರವಾಲ್ ಅಂತಿಮ ಸುತ್ತಿನಲ್ಲಿ ತಮ್ಮ ಪಂದ್ಯಗಳನ್ನು ಗೆದ್ದರು. ಆದರೆ, ಆರ್.ವೈಶಾಲಿ ಅವರು ಉಲ್ವಿಯಾ ಫತಾಲಿಯೇವಾ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!