ಚೆಸ್ ಆಟಗಾರ ಆರ್‌. ಪ್ರಜ್ಞಾನಂದರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್‌ ಚೆಸ್‌ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಭಾರತದ ಭರವಸೆಯ ಆಟಗಾರ ಆರ್‌. ಪ್ರಜ್ಞಾನಂದ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಈ ಬಗ್ಗೆ ಎಕ್ಸ್‌ ಮಾಡಿರುವ ಮೋದಿ, ‘ನಿಮ್ಮ ಬಗ್ಗೆ ನಮಗೆ ಹೆಮ್ಮಯಿದೆ’ ಎಂದಿದ್ದಾರೆ. ‘ನೀವು ನಿಮ್ಮ ಕೌಶಲ್ಯವನ್ನು ಜಗತ್ತಿಗೆ ತೋರಿಸಿದ್ದೀರಿ. ನಿಮ್ಮ ಸಾಮ‌ರ್ಥ್ಯದ ಮೂಲಕ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಕಠಿಣ ಸವಾಲು ನೀಡಿದ್ದೀರಿ. ಇದು ಸಣ್ಣ ವಿಷಯವಲ್ಲ. ಮುಂದಿನ ಪಂದ್ಯಗಳಿಗೆ ನಿಮಗೆ ಶುಭ ಹಾರೈಸುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!