ಇದೆಂಥಾ ವಿಚಿತ್ರ ಆಚರಣೆ, ಹಬ್ಬದ ಹೆಸರಿನಲ್ಲಿ ಒಬ್ಬರ ಮೇಲೊಬ್ಬರು ಕಲ್ಲು ತೂರಾಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶದಲ್ಲಿ ಇಂದಿಗೂ ಹಳೆಯ ಸಂಪ್ರದಾಯ ಮುಂದುವರಿದಿದೆ. ಚಿಂದ್ವಾರಾ ಜಿಲ್ಲೆಯಲ್ಲಿ ಶುಕ್ರವಾರ ಮತ್ತೊಮ್ಮೆ ವಿಶ್ವವಿಖ್ಯಾತ ರಕ್ತಸಿಕ್ತ ಆಟ ಗೋಟ್ಮಾರ್ ಅನ್ನು ಆಡಲಾಯಿತು. ಕಳೆದ ನೂರು ವರ್ಷಗಳಿಂದ, ಚಿಂದ್ವಾರದ ಪಾಂಡುರ್ನಾದಲ್ಲಿ ಪೋಲಾ ಉತ್ಸವದ ಎರಡನೇ ದಿನದಂದು ಗೋಟ್ಮಾರ್ ಜಾತ್ರೆ ನಡೆಯುತ್ತದೆ. ಇದರ ವಿಶೇಷವೆಂದರೆ ಜಾತ್ರೆಯಲ್ಲಿ ನರೆದಿರುವ ಜನ ಒಬ್ಬರ ಮೇಲೊಬ್ಬರು ಕಲ್ಲು ತೂರಾಟ ನಡೆಸುತ್ತಾರೆ. ಈ ಆಚರಣೆ ಬಗ್ಗೆ ಅಲ್ಲಿನ ಸರಕಾರ ಆ ಸಂಪ್ರದಾಯಕ್ಕೆ ಮೂಕಪ್ರೇಕ್ಷಕನಾಗಿ ನೋಡುವುದನ್ನು ಬಿಟ್ಟರೆ ಬೇರೇನೂ ಮಾಡಲಾಗುತ್ತಿಲ್ಲ.

ಪ್ರತಿ ವರ್ಷವೂ ಈ ರಕ್ತಸಿಕ್ತ ಆಟವನ್ನು ಜನರು ಆಡದಂತೆ ತಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೂ ಸಂಪ್ರದಾಯದ ಹೆಸರಿನಲ್ಲಿ ಈ ರಕ್ತಸಿಕ್ತ ಸಾವಿನ ಆಟ ಮುಂದುವರಿದಿದೆ. ಇದರಲ್ಲಿ ಪ್ರತಿ ವರ್ಷ ನೂರಾರು ಜನರು ಗಾಯಗೊಂಡು, ಪ್ರಾಣವನ್ನೂ ಕಳೆದುಕೊಂಡ ಪ್ರಕರಣಗಳಿವೆ. ಇಷ್ಟೆಲ್ಲಾ ಅನಾಹುತ ಆದರೂ ಜನ ಆಚರಿಸುವ ಸಾಂಪ್ರದಾಯಿಕ ಮಹತ್ವವು ಕಳೆದುಹೋಗಿಲ್ಲ. ಮಾನವ ಹಕ್ಕುಗಳ ಆಯೋಗವೂ ಆಟವನ್ನು ಮುಚ್ಚುವಂತೆ ಶಿಫಾರಸು ಮಾಡಿದೆ. ಆದರೆ ಸಂಪ್ರದಾಯದ ಹೆಸರಿನಲ್ಲಿ ಇಂದಿಗೂ ಮುಂದುವರಿದಿದೆ.

ಈ ಜಾತ್ರೆಯ ಸಂದರ್ಭದಲ್ಲಿ ಅಧಿದೇವತೆ ಚಂಡಿಕಾ ದೇವಿಗೆ ಪೂಜೆ ಸಲ್ಲಿಸಿದ ನಂತರ ಜಾಮ್ ನದಿಯ ಮಧ್ಯದಲ್ಲಿ ಮುತ್ತುಗದ ಮರ ಹಾಗೂ ಧ್ವಜವನ್ನು ನೆಡಲಾಗುತ್ತದೆ. ಆಗ ಒಂದು ಕಡೆಯಿಂದ ಪಾಂಡುರ್ಣನ ಜನರು ಮತ್ತು ಇನ್ನೊಂದು ಕಡೆಯಿಂದ ಸಾವರಗಾಂವ್ ಜನರು ಪರಸ್ಪರ ಕಲ್ಲುಗಳನ್ನು ಎಸೆಯುತ್ತಾರೆ. ಕೊನೆಯಲ್ಲಿ, ಧ್ವಜವನ್ನು ಸ್ವೀಕರಿಸುವಲ್ಲಿ ಯಶಸ್ವಿಯಾದವರನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ ಚಂಡಿಕಾ ದೇವಿಗೆ ಪೂಜೆ ಸಲ್ಲಿಸಿದ ನಂತರ ಎರಡೂ ಗ್ರಾಮಗಳ ಜನರು ನದಿಯ ಮಧ್ಯದಲ್ಲಿ ಮರ ಹಾಗೂ ಧ್ವಜ ನೆಟ್ಟು ಜಾತ್ರೆಗೆ ಚಾಲನೆ ನೀಡಿದರು. ಇದಾದ ನಂತರ ಪರಸ್ಪರ ಕಲ್ಲು ತೂರಿಕೊಳ್ಳುವ ರಕ್ತಸಿಕ್ತ ಆಟ ಆರಂಭವಾಯಿತು. ಯಾರಿಗೆ ಕಲ್ಲು ಸಿಕ್ಕರೂ ಎದುರಾಳಿಯ ಮೇಲೆ ಎಸೆಯುತ್ತಾರೆ. ಈ ಗಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಗಾಗಿ ಜಿಲ್ಲಾಡಳಿತವು ಸಿವಿಲ್ ಆಸ್ಪತ್ರೆ ಜತೆಗೆ 4 ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರಿ ಅಂಕಿಅಂಶಗಳ ಪ್ರಕಾರ, ಗಾಯಗೊಂಡವರ ಸಂಖ್ಯೆ 154 ಕ್ಕೆ ತಲುಪಿದೆ. ಆದರೆ ಸ್ಥಳೀಯ ನಾಗರಿಕರ ಪ್ರಕಾರ ಈ ಸಂಖ್ಯೆ 250 ಕ್ಕಿಂತ ಹೆಚ್ಚು. ಅವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಿಲ್ಲಾಧಿಕಾರಿ, ಎಸ್ಪಿ, 6 ಎಸ್‌ಡಿಒಪಿ, 15 ಟಿಐ, 30 ಎಸ್‌ಐ ಮತ್ತು 25 ಎಎಸ್‌ಐ ಸೇರಿದಂತೆ ಸುಮಾರು 500 ಸಿಬ್ಬಂದಿಯನ್ನು ಈ ಜಾತ್ರೆಯಲ್ಲಿ ಬಿಗಿ ಭದ್ರತೆಗಾಗಿ ನಿಯೋಜಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 12:45ಕ್ಕೆ ಜಾತ್ರೆ ಆರಂಭಗೊಂಡಿದ್ದು, ಪಾಂಡುರ್ಣ ಮತ್ತು ಸಾವರಗಾಂವ್ ಜನರ ಪರಸ್ಪರ ಒಪ್ಪಂದದೊಂದಿಗೆ ರಕ್ತಸಿಕ್ತ ಆಟ ಸಂಜೆ 6:45ಕ್ಕೆ ಮುಕ್ತಾಯವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!