Wednesday, September 27, 2023

Latest Posts

ದಿನಭವಿಷ್ಯ| ನಿಮ್ಮ ಹೊಂದಾಣಿಕೆಯ ಸ್ವಭಾವದಿಂದಾಗಿ ಎಲ್ಲರನ್ನು ಸರಿದೂಗಿಸಿಕೊಂಡು ಹೋಗುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಸಂತೋಷದ ದಿನ. ಸಂಗಾತಿ ಜತೆಗೆ ಸೌಹಾರ್ದಮಯ ಸಂಬಂಧ. ಕಾರ್ಯ ಸಾಫಲ್ಯ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಮೊಳೆಯುವುದು.

ವೃಷಭ
ಎಲ್ಲ ವಿಷಯಗಳಲ್ಲೂ ನಿಮಗೆ ಅನುಕೂಲಕರ ಫಲಿತಾಂಶ. ಮಹತ್ವದ ಕಾರ್ಯ ಅನುಷ್ಠಾನ ಮಾಡಲು ಸಕಾಲ. ಕಾರ್ಯಸಿದ್ಧಿ. ದೈಹಿಕ ನೋವು ನಿವಾರಣೆ.

ಮಿಥುನ
ಕಠಿಣ ಗುರಿ ಸಾಧಿಸಬೇಕಾದ ಅನಿವಾರ್ಯತೆ. ಹಾಗಾಗಿ ದಿನವಿಡೀ ಉದ್ವಿಗ್ನತೆ, ಒತ್ತಡ. ವಾದವಿವಾದಗಳಿಂದ ದೂರವಿರಿ.

ಕಟಕ
ಪ್ರಗತಿಪರ ದಿನ. ಕಾರ್ಯದಲ್ಲಿ ಯಶಸ್ಸು. ನಿಮ್ಮ ಹೊಂದಾಣಿಕೆಯ ಸ್ವಭಾವದಿಂದಾಗಿ ಎಲ್ಲರನ್ನು ಸರಿದೂಗಿಸಿಕೊಂಡು ಹೋಗುವಿರಿ.

ಸಿಂಹ
ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ. ಭಾವನೆಯ ಮೇಲೆ ನಿಯಂತ್ರಣವಿರಲಿ. ಸಮಚಿತ್ತದಿಂದ ವರ್ತಿಸಿ. ಕೆಲಸದಲ್ಲಿ ಹೊಣೆಗಾರಿಕೆ ಹೆಚ್ಚುವುದು.

ಕನ್ಯಾ
ಬಿಕ್ಕಟ್ಟಿನ ಸಂದರ್ಭ ಒದಗಿದರೂ ಶಾಂತವಾಗಿ ಯೋಚಿಸಿ. ಅವಸರದ ಪ್ರತಿಕ್ರಿಯೆ ತೋರದಿರಿ. ಅನಿರೀಕ್ಷಿತ ವಲಯದಿಂದ ನೆರವು ಪಡೆಯುವಿರಿ.

ತುಲಾ
ಅಶಾಂತಿ ಹೆಚ್ಚಿಸುವ ಬೆಳವಣಿಗೆ. ನಿರಾಳ ಮನಸ್ಸಿನಿಂದ ಸಮಸ್ಯೆ ಬಗೆಹರಿಸಿ. ಅವಸರದ ನಿರ್ಧಾರ ತಳೆಯದಿರಿ. ಹಣದ ವಿಷಯದಲ್ಲಿ ಲೆಕ್ಕಾಚಾರ ತಪ್ಪಬಹುದು.

ವೃಶ್ಚಿಕ
ವೃತ್ತಿಯಲ್ಲಿ ಉದ್ವಿಗ್ನ ಪರಿಸ್ಥಿತಿ. ಆದರೆ ಸಮಾಧಾನದಿಂದ ಯೋಚಿಸಿ ಕಾರ್ಯ ಎಸಗಿದರೆ ಎಲ್ಲವೂ ಸುಸೂತ್ರವಾಗುವುದು. ಕೌಟುಂಬಿಕ ಬೆಂಬಲ.

ಧನು
ನೀವು ಬಯಸಿದ ವಿಷಯದಲ್ಲಿ  ನಿಮಗೆ ಅನುಕೂಲಕರ ಪರಿಸ್ಥಿತಿ ಏರ್ಪಡಲಿದೆ. ಆಪ್ತರ ಜತೆ ಭಿನ್ನಮತ ಶಮನ. ಇತರರ ಭಾವನೆಗೂ ಬೆಲೆ ಕೊಡಿರಿ.

ಮಕರ
ನೀವಿಂದು ಭಾವುಕರಾಗಿ ವರ್ತಿಸುವುದಕ್ಕಿಂತ ಪ್ರಾಕ್ಟಿಕಲ್ ಆಗಿ ವರ್ತಿಸುವುದು ಮುಖ್ಯ.  ಹೆಚ್ಚುವರಿ ಖರ್ಚು ಒದಗುವುದು. ಹಿತಮಿತ ಆಹಾರ ಸೇವಿಸಿ.

ಕುಂಭ
ನಿಮಗೆ ಪೂರಕವಾದ ದಿನ. ಆತ್ಮವಿಶ್ವಾಸ ಹೆಚ್ಚಿಸುವ ಪ್ರಸಂಗ. ಕಠಿಣ ಕಾರ್ಯವೂ ಇಂದು ಸುಲಭವಾಗಿ ನೆರವೇರುವುದು. ಕೌಟುಂಬಿಕ ಶಾಂತಿ.

ಮೀನ
ನಿಮ್ಮ ವಿಶ್ವಾಸ ಕುಂದಿಸುವ ಬೆಳವಣಿಗೆ ಉಂಟಾದೀತು. ಅದನ್ನು ಧೈರ್ಯದಿಂದ ಎದುರಿಸಿ. ಇತರರಿಂದ ಸೂಕ್ತ ಸಹಾಯ ನಿಮಗೆ ದೊರಕುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!