October 12, 2026
Monday, October 12, 2026
spot_img

ಸಿಎಂ ಡಿಕೆಶಿ ಮನೆಯ ಮುಂದೆ ಕೋಳಿ ತಲೆ, ನಿಂಬೆಹಣ್ಣು! ತನಿಖೆಗಿಳಿದ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸದಾಶಿವನಗರದ ಮನೆಯ ಮುಂದೆ ವಾಮಾಚಾರ ನಡೆಸಿ ಕೆಲ ವಸ್ತುಗಳನ್ನು ಎಸೆದು ಹೋಗಲಾಗಿದೆ.

ಡಿಕೆಶಿ ಮುಖ್ಯಮಂತ್ರಿ ಆಗಿದ್ದಕ್ಕೆ ಹೊಟ್ಟೆಕಿಚ್ಚಿನಿಂದ ಯಾರೋ ವಾಮಾಚಾರ ಮಾಡಿಸಿದ್ದಾರೆಯೇ ಎನ್ನುವ ಶಂಕೆ ಎದುರಾಗಿದೆ. ಮನೆಯ ಮುಂದೆ ಮೂರು ರಸ್ತೆ ಸೇರುವ ಜಾಗದಲ್ಲಿ ನಿಂಬೆಹಣ್ಣು, ಕೋಳಿಯ ತಲೆ ಕಾಣಿಸಿದೆ.

ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇದು ನಿಜವಾಗಿಯೂ ವಾಮಾಚಾರವಾ? ಮಾಡಿಸಿದ್ದು ಯಾರು? ಯಾಕೆ? ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.ಹೇಳಿಕೇಳಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಪಾರ ದೈವಭಕ್ತಿ ಹೊಂದಿರುವವರು. ತಮ್ಮ ಜೀವನದ ಪ್ರತಿಯೊಂದು ಗಳಿಗೆ ನಿರ್ಧಾರಗಳನ್ನು ಜ್ಯೋತಿಷಿಗಳಲ್ಲಿ ಕೇಳಿ ಅರ್ಚಕರನ್ನು ಕರೆಸಿ ಪೂಜೆ ಮಾಡಿಸುತ್ತಾರೆ.ತುಮಕೂರಿನ ನೊಣವಿನಕೆರೆ ಅಜ್ಜಯ್ಯನ ಅಣತಿಯಂತೆಯೇ ನಡೆಯುವವರು, ಇದೀಗ ಅವರ ನಿವಾಸದ ಹಿಂದೆ ಈ ರೀತಿ ಕಾಣಿಸಿಕೊಂಡಿದ್ದು ಡಿ ಕೆ ಶಿವಕುಮಾರ್ ಕುಟುಂಬಸ್ಥರಿಗೆ ಮತ್ತು ಅವರ ಅಭಿಮಾನಿಗಳಿಗೆ ಆತಂಕಕ್ಕೀಡುಮಾಡಿದೆ.

Must Read