ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಡಲೆಕಾಳಿನ ಉಸ್ಲಿ ಗಣಪತಿಗೆ ಬೇಕೇ ಬೇಕು. ಇನ್ನೂ ನಿಮ್ಮ ಮನೆಗಳಲ್ಲಿ ಗಣಪತಿ ಕೂರಿಸಿದ್ದರೆ ಇದನ್ನೂ ಒಂದು ದಿನ ನೈವೇದ್ಯವನ್ನು ಮಾಡಿ. ಈ ಉಸ್ಲಿಯನ್ನು ಈ ರೀತಿ ಮಾಡಿದರೆ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿ:
ಒಂದು ಕಪ್ ಕೆಂಪು ಕಡ್ಲೆ, ಎರಡು ಹಸಿಮೆಣಸಿನಕಾಯಿ, ಅರ್ಧ ಕಪ್ ಕೊಬ್ಬರಿ ತುರಿ, ಚಿಟಿಕೆ ಹಿಂಗು, ಚಿಟಿಕೆ ಅರಿಶಿನ, ಒಂದು ತುಂಡು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು.
ಮಾಡುವ ವಿಧಾನ:
ಮೊದಲು ಕೆಂಪು ಕಡಲೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಬಟ್ಟಲಿಗೆ ಹಾಕಿ. ಅದಕ್ಕೆ ಬೆಲ್ಲ, ಅರಶಿನ ಹುಡಿ, ಉಪ್ಪು ಸೇರಿಸಿ ಬೇಯಲಿಡಿ. ಚೆನ್ನಾಗಿ ಬೆಂದ ಕಡಲೆಯನ್ನು ನೀರು ಬಸಿದು ಪಾತ್ರೆಗೆ ವರ್ಗಾಯಿಸಿ. ಒಲೆಯ ಮೇಲೆ ಬಾಣಲೆಯಿಟ್ಟು ಸಾಸಿವೆ, ಜೀರಿಗೆ, ಹಸಿ ಮೆಣಸು, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು, ಇಂಗು ಹಾಕಿ, ಒಗ್ಗರಣೆ ರೆಡಿಮಾಡಿ. ಈಗ ಇದಕ್ಕೆ ಬೇಯಿಸಿದ ಕಡಲೆ ಹಾಕಿ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಕೊಬ್ಬರಿ ತುರಿಯನ್ನು ಮಿಶ್ರಮಾಡಿ. ರುಚಿ ರುಚಿಯಾದ ಕಡ್ಲೆ ಉಸ್ಲಿ ರೆಡಿ!