18 ಕಿ.ಮಿ ಗುಡ್ಡವೇರಿ ಚುನಾವಣಾ ಸಮಸ್ಯೆ ಪರಿವಿಕ್ಷಣೆ ನಡೆಸಿದ ಭಾರತದ ನೂತನ ಮುಖ್ಯ ಚುನಾವಣಾಧಿಕಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
18 ಕಿ.ಮಿ ಗುಡ್ಡವೇರುವ ಮೂಲಕ ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಚುನಾವಣಾ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡ ಭಾರತದ ಮುಖ್ಯ ಚುನಾವಣಾಧಿಕಾರಿ ರಾಜೀವ್‌ ಕುಮಾರ್‌ ಪರಿವಿಕ್ಷಣೆ ನಡೆಸಿದ್ದಾರೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ದೂರದ ಮತಗಟ್ಟೆಗಳಾದ ಡುಮಾಕ್ ಮತ್ತು ಕಲ್ಗೋತ್ ಗ್ರಾಮಗಳಲ್ಲಿನ ಚುನಾವಣಾ ಕೆಂದ್ರಗಳನ್ನು ವೀಕ್ಷಿಸಿದ ಅವರು “ಚುನಾವಣಾ ಸಂದರ್ಭದಲ್ಲಿ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಮತದಾರರ ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ಇದೇ ರೀತಿ ಸಮಸ್ಯೆಯಲ್ಲಿರುವ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಗಮನಿಸಿ ಆ ಪ್ರದೇಶಗಳಲ್ಲಿನ ಮತದಾರರ ಅವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸುತ್ತೇನೆ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!