ಅಮೆರಿಕನ್ನರಿಗೆ ಮುಳುವಾಗುತ್ತಿದೆ ʼಗನ್‌ʼ ಸಂಸ್ಕೃತಿ: ಗುಂಡುಹಾರಿಸಿ ಪೆಟ್ರೋಲ್ ಬಂಕ್‌ ದರೋಡೆಗೈದ ಬಾಲಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕದಲ್ಲಿ ಮುಕ್ತವಾಗಿ ನೀಡಲಾಗಿರುವ ʼಮುಕ್ತ ಶಸ್ತ್ರಾಸ್ತ್ರ ಬಳಕೆʼ ಪರವಾನಗಿಯು ದಿನಕಳೆದಂತೆ ದೇಶಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇತ್ತೀಚೆಗೆ ಬಂದೂಕು ದಾರಿಯೊಬ್ಬ ಶಾಲೆಯೊಂದಕ್ಕೆ ನುಗ್ಗಿ 19 ಮಕ್ಕಳು ಸೇರಿ 21 ಜನರನ್ನು ನಿರ್ದಯವಾಗಿ ಹತ್ಯೆಗೈದ ಘಟನೆ ಸಂಭವಿಸಿತ್ತು. ಈ ಘಟನೆ ಮಾಸುವ ಮುನ್ನವೇ ಹಲವಾರು ಗುಂಡಿನ ದಾಳಿ ಪ್ರಕರಣಗಳು ನಡೆದು ದೇಶವೇ ತತ್ತರಿಸಿತ್ತು. ಇದೀಗ ಈ ಸಾಲಿಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು ಅಮೆರಿಕನ್ನರು ಮತ್ತೊಮ್ಮೆ ಆಘಾತಗೊಂಡಿದ್ದಾರೆ.
12 ರ ಹರೆಯದ ಬಾಲಕನೊಬ್ಬ ಅಮೆರಿಕದ ಮಿಚಿಗನ್ ನಗರದ ಹಾರ್ಟ್‌ಫೋರ್ಡ್‌ನ ಪೆಟ್ರೋಲ್ ಬಂಕ್‌ನಿಂದ ಪೆಟ್ರೋಲ್ ಬಂಕ್‌ನಲ್ಲಿ ಬಂದೂಕು ತೋರಿಸಿ ದರೋಡೆ ನಡೆಸಿರುವ ಘಟನೆ ನಡೆದಿದೆ.ಈ ಕುರಿತ ದೃಶ್ಯಾವಳಿಗಳು ವೈರಲ್‌ ಆಗಿವೆ. ಘಟನೆ ಜೂನ್ 1 ರ ಮಧ್ಯಾಹ್ನ ಘಟನೆ ನಡೆದಿದೆ. ಪೆಟ್ರೋಲ್‌ ಬಂಕ್‌ ಒಂದರಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿದ್ದ ಬಾಲಕ, ತನ್ನ ಸರದಿ ಬಂದಾಗ ಚೀಲದಲ್ಲಿದ್ದ ಗನ್‌ ಹೊರತೆಗೆದು ಹಣವನ್ನು ಚೀಲಕ್ಕೆ ಹಾಕುವಂತೆ ಕೆಲಸಗಾರರಲ್ಲಿ ಸೂಚಿಸಿದ್ದಾನೆ. ʼನೀನು ಗಂಭೀರವಾಗಿ ಈ ಕೃತ್ಯ ನಡೆಸುತ್ತಿದ್ದೀಯಾʼ ಎಂದು ಕೆಲಸಗಾರ್ತಿ ಪ್ರಶ್ನಿಸಿದಾಗ, ಕ್ರೋಧಗೊಂಡ ಬಾಲಕ ಬಂದೂಕಿನಿಂದ ಛಾವಣಿಯತ್ತ ಗುಂಡು ಹಾರಿಸಿದ್ದಾನೆ. ಈ ವೇಳೆ ಭಯಗೊಂಡ ಕೆಲಸಗಾರ್ತಿ, ನೀಲಿ ಚೀಲವೊಂದರಲ್ಲಿ ಹಣ ತುಂಬಿಸಿಕೊಟ್ಟು ಹುಡುಗನಿಗೆ ಅಲ್ಲಿಂದ ಹೋಗುವಂತೆ ಕೋರಿಕೊಂಡಿದ್ದಾಳೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಹುಡುಗ $ 5000 ಹಣ ದೋಚಿ ಓಡಿಹೋಗಿದ್ದಾನೆ. ಆದರೆ ಕೆಲವೇ ಕ್ಷಣಗಳಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಶಾಲೆ ಮುಗಿದ ಬಳಿಕ ಬಾಲಕನ ಕೈಗೆ ಬಂದೂಕು ಸಿಕ್ಕಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಆದರೆ ʼಅಮೆರಿಕದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿʼ ಎಂದು ಹಾರ್ಡ್‌ ಫೋರ್ಡ್‌ ಪೊಲೀಸ್‌ ಲೆಫ್ಟಿನೆಂಟ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!