ಮುಖ್ಯಮಂತ್ರಿ ಬಿರೇನ್ ಸಿಂಗ್ ಡುರಾಂಡ್ ಕಪ್ ಟೂರ್ನಾಮೆಂಟಿಗೆ ಆಹ್ವಾನಿಸಿದ ‘ಕೂಲ್’ ಸ್ಟೈಲ್ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಇಲ್ಲಿನ ಖುಮಾನ್ ಲಂಪಾಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಮಣಿಪುರ ಆವೃತ್ತಿಯ ಡ್ಯುರಾಂಡ್ ಕಪ್ ಫುಟ್‌ಬಾಲ್ ಟೂರ್ನಮೆಂಟ್‌ಗೆ ಆಹ್ವಾನಿಸಿದ್ದಾರೆ. ಇಂದು (ಗುರುವಾರ) ಮಣಿಪುರ ಆವೃತ್ತಿಯ 131ನೇ ಡ್ಯುರಾಂಡ್ ಕಪ್‌ ಪಂದ್ಯಾವಳಿಗಾಗಿ ಕ್ರೀಡಾಪಟುಗಳಿಗೆ ಆಹ್ವಾನ ನೀಡಿದರು. ಜೊತೆಗೆ ಎಲ್ಲಾ ಕ್ರೀಡಾ ಪ್ರೇಮಿಗಳು ಆಟವನ್ನು ವೀಕ್ಷಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.

ಈ ಬಗ್ಗೆ ತಮ್ಮ ಟ್ವೀಟ್‌ ಮಾಡಿರುವ ಸಿಎಂ, ವಿಶ್ವದ ಅತ್ಯಂತ ಹಳೆಯ ಫುಟ್‌ಬಾಲ್ ಪಂದ್ಯಾವಳಿಗಳಲ್ಲಿ ಒಂದಾದ ಡ್ಯುರಾಂಡ್ ಕಪ್‌ನ ಉದ್ಘಾಟನಾ ಸಮಾರಂಭವನ್ನು ಒಟ್ಟಾಗಿ ಆಚರಿಸೋಣ ಎಂದು ಕರೆ ನೀಡಿದ್ದಾರೆ. ಮೂಲತಃ ಫುಟ್ಬಾಲ್ ಆಟಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಬಿರೇನ್‌ ಸಿಂಗ್‌ ಕ್ರೀಡಾಂಗಣದಲ್ಲಿ ಫುಲ್‌ನೊಂದಿಗೆ ಆಟಆಡುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ.

131 ನೇ ಡ್ಯುರಾಂಡ್ ಕಪ್‌ನ ಮಣಿಪುರ ಆವೃತ್ತಿಯು ಆಗಸ್ಟ್ 18 ರಂದು NEROCA FC ಮತ್ತು TRAU FC ತಂಡಗಳ ನಡುವೆ ನಡೆಯಲಿದೆ. ರಾಜ್ಯವು ಸೆಪ್ಟೆಂಬರ್ 5 ರವರೆಗೆ 10 ಗುಂಪುಗಳ ನಡುವೆ ಪಂದ್ಯಗಳನ್ನು ಆಯೋಜಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!