ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯದ ಗೃಹ ಇಲಾಖೆಯು 2024ರ ಮುಖ್ಯಮಂತ್ರಿ ಪದಕ ಪಡೆಯುವವರ ಪಟ್ಟಿಯನ್ನು ತಯಾರಿಸಿದ್ದು, ಒಟ್ಟು 197 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈ ಗೌರವವನ್ನು ನೀಡಲು ಸಮ್ಮತಿ ದೊರೆತಿದೆ.
ವಿಶೇಷವಾಗಿ, ನಕ್ಸಲ್ ನಿಗ್ರಹ ಪಡೆಯ ಎಲ್ಲಾ ಸದಸ್ಯರಿಗೆ ಕೂಡ ಈ ಬಾರಿ ವಿಶೇಷ ಮುಖ್ಯಮಂತ್ರಿ ಪದಕವನ್ನು ನೀಡಲಾಗಿದ್ದು, ಅವರ ಸಾಹಸ ಮತ್ತು ಶ್ರಮವನ್ನು ಗೌರವಿಸಲಾಗಿದೆ. ಈ ಪಟ್ಟಿಯನ್ನು ಗೃಹ ಇಲಾಖೆಯು ಅಂತಿಮಗೊಳಿಸಿದ್ದು, ಶೀಘ್ರದಲ್ಲೇ ಔಪಚಾರಿಕ ಪ್ರದಾನ ಸಮಾರಂಭ ಆಯೋಜನೆಯಾಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿಗಳ ಪದಕಕ್ಕೆ ತನ್ನದೇ ಆದ ಕೆಲವೊಂದು ಅರ್ಹತೆ, ಮಾನದಂಡಗಳಿವೆ. ಅವುಗಳೆಂದೆರೆ
ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿರಬೇಕು
ಪ್ರಶಸ್ತಿ ಪಡೆದ ವರ್ಷ ‘ಅಸಾಧಾರಣ ಸೇವೆ’ ಸಲ್ಲಿಸಿರಬೇಕು
ಸಮಾಜಕ್ಕೆ ಮಾದರಿಯಾದ ಶ್ಲಾಘನೀಯ ಸೇವೆ ಮಾಡಿರಬೇಕು
ಅತ್ಯುತ್ತಮ ಕೆಲಸಗಾರ ಅಂತ ಅಧಿಕಾರಿಗಳು ಗುರುತಿಸಬೇಕು
ಪೊಲೀಸ್ ಧ್ವಜ ದಿನದ ಸಂದರ್ಭದಲ್ಲಿ, ಏಪ್ರಿಲ್ 2ರಂದು ಮುಖ್ಯಮಂತ್ರಿ ಪದಕವನ್ನು ವಿತರಿಸಲಾಗುತ್ತದೆ.