ನರ್ಸ್ ಕೈ ಜಾರಿ ಕೆಳಗೆ ಬಿದ್ದ ಮಗು ಸಾವು: ಹುಟ್ಟುವಾಗಲೇ ಸತ್ತಿದೆ ಎಂದು ಕತೆ ಕಟ್ಟಿದ ಆಸ್ಪತ್ರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲಕ್ನೋದ ಚಿನ್ಹಾಟ್ ನ ಮಲ್ಹೌರ್ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿನವಜಾತ ಶಿಶುವೊಂದು ಸ್ಟಾಫ್ ನರ್ಸ್ ಕೈಯಿಂದ ಜಾರಿ ನೆಲಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೆರಿಗೆಯ ನಂತರ ನರ್ಸ್ ಮಗುವನ್ನು ಟವೆಲ್ ನಲ್ಲಿ ಸುತ್ತಿಕೊಳ್ಳದೆ ಎತ್ತಿದಾಗ ಮಗು ಕೈಯಿಂದ ಜಾರಿ ಬಿದ್ದಿದೆ.
ಆದರೆ ಆಸ್ಪತ್ರೆಯ ಅಧಿಕಾರಿಗಳು ಮಗು ಹುಟ್ಟುವಾಗಲೇ ಸತ್ತು ಹೋಗಿದೆ ಎಂದು ಹೇಳಿಕೆ ನೀಡಿದ್ದರಿಂದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮಕ್ಕಳ ಸಾವನ್ನು ಹತ್ತಿಕ್ಕಲು ಸುಳ್ಳು ಕಥೆ ಹೆಣೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಚಿನ್ಹತ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕವಾಗಿ ದೂರು ನೀಡಿದ ಮೃತ ಮಗುವಿನ ತಂದೆ ಜೀವನ್ ರಜಪೂತ್ ಅವರು ಪ್ರಕರಣ ದಾಖಲಿಸಿದ್ದಾರೆ. ಘಟನೆಯ ನಂತರ ಅವರ ಪತ್ನಿ ಪೂನಂ ತೀವ್ರ ಆಘಾತಕ್ಕೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಜಪೂತ್ ಹೇಳಿದ್ದಾರೆ.
ಇನ್ನು ಮಗುವೀಣೆ ಮರಣೋತ್ತರ ಪರೀಕ್ಷೆ ನಂತರ ತಲೆಗೆ ಗಾಯವಾದ ಪರಿಣಾಮ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಪೊಲೀಸರು ನರ್ಸ್ ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏಪ್ರಿಲ್ 19ರಂದು ತನ್ನ ಹೆಂಡತಿಗೆ ಹೆರಿಗೆ ನೋವು ಕಾಣಿಸಿಕೊಂಡು ರಾತ್ರಿ ಹೆರಿಗೆಯಾದಾಗ ಮಗು ಸತ್ತಿದೆ ಎಂದು ನನಗೆ ತಿಳಿಸಲಾಯಿತು. ಆದರೆ, ನನ್ನ ಪತ್ನಿಯನ್ನು ಮಾತನಾಡಿಸಿದಾಗ ಹೆರಿಗೆ ನಾರ್ಮಲ್ ಆಗಿದ್ದು, ಮಗು ಜೀವಂತವಾಗಿರುವುದನ್ನು ಕಂಡಿದ್ದೇನೆ. ನರ್ಸ್ ನನ್ನ ಮಗುವನ್ನು ಯಾವುದೇ ಟವೆಲ್ ಇಲ್ಲದೆ ತನ್ನ ಕೈಯಲ್ಲಿ ತೆಗೆದುಕೊಳ್ಳುತ್ತಿರುವುದನ್ನು ನೋಡಿದ್ದೇನೆ. ಮಗು ಕೈಯಿಂದ ಜಾರಿದಾಗ ನರ್ಸ್ ನನಗೆ ಹೇಳಿದರು. ಆಗ ನಾನು ಕಿರುಚಲು ಪ್ರಾರಂಭಿಸಿದಾಗ ನರ್ಸ್ ಮತ್ತು ಇತರ ಸಿಬ್ಬಂದಿಗಳು ಬಾಯಿಯನ್ನು ಮುಚ್ಚಿಕೊಳ್ಳುವಂತೆ ಬೆದರಿಕೆ ಹಾಕಿದರು ಎಂದು ಪತ್ನಿ ಹೇಳಿದ್ದಾರೆ ಎಂದು ರಜಪೂತ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!