ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಂಸದರ ಕಾರು ಡಿಕ್ಕಿ ಹೊಡೆದು ಮಗು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಸಂಸದ ಅಬು ತಾಹೆರ್ ಖಾನ್ ಅವರ ಕಾರಿಗೆ ಡಿಕ್ಕಿ ಹೊಡೆದು 4 ವರ್ಷದ ಮಗು ಮೃತಪಟ್ಟಿದೆ.
ಇಲ್ಲಿನ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಅಪಘಾತ ನಡೆದಾಗ ಸಂಸದ ಅಬು ತಾಹೆರ್ ಖಾನ್ ಕಾರಿನೊಳಗೆ ಇದ್ದರು. ಮಗು ಕಾರಿನ ಮುಂದೆ ಬಂದ ಕಾರಣ ಅಪಘಾತವಾಗಿದೆ ಎಂದು ಎಂದು ಹೇಳಿದ್ದಾರೆ.

ಚಿಕ್ಕ ಮಗು, ಅವನಿಗೆ ಐದು ಅಥವಾ ಆರು ವರ್ಷ. ನಾವು ಅವನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ಇದು ನನ್ನ ಮುಂದೆ ಸಂಭವಿಸಿತು. ಬಹುಶಃ ಅವರು ಮಿದುಳಿನ ಗಾಯವಾಗಿರಬೇಕು ಎಂದು ಖಾನ್ ಆಸ್ಪತ್ರೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ಅಪಘಾತ ಸಂಭವಿಸಿದಾಗ ತೃಣಮೂಲ ಕಾಂಗ್ರೆಸ್ ನಾಯಕ ಮುರ್ಷಿದಾಬಾದ್‌ನ ಬೆಹ್ರಾಂಪೋರ್‌ಗೆ ತೆರಳುತ್ತಿದ್ದರು. ಮಗು ತನ್ನ ತಾಯಿಯೊಂದಿಗೆ ಬ್ಯಾಂಕ್ ಬಳಿಗೆ ಹೋಗುತ್ತಿದ್ದಾಗ ಟಿಎಂಸಿ ಸಂಸದರ ಕಾರುಡಿಕ್ಕಿ ಹೊಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!