ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಶ್ರೀರಾಂಪುರದಲ್ಲಿ ತಂಪು ಪಾನೀಯ ಕುಡಿದು ಮಗು ಅಸ್ವಸ್ಥವಾಗಿದೆ ಎನ್ನಲಾಗಿದೆ. ಮಗು ಪ್ಯಾಕೆಟ್ ಜ್ಯೂಸ್ ಕುಡಿದ ನಂತರ ಅಸ್ವಸ್ಥವಾಗಿದೆ, ಕಪ್ಪು ಬಣ್ಣದ ವಸ್ತು ಜ್ಯೂಸ್‌ನಲ್ಲಿತ್ತು ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.
ಪೋಷಕರು ಪ್ಯಾಕೆಟ್ ಪರಿಶೀಲಿಸಿದ್ದು ತಂಪು ಪಾನೀಯದ ಪ್ಯಾಕೆಟ್ನಲ್ಲಿ ಕಪ್ಪು ಬಣ್ಣ ಮಿಶ್ರಿಣ ವಸ್ತುವೊಂದು ಸಿಕ್ಕಿದೆ. ಇನ್ನು ಪ್ಯಾಕೆಟ್ನಲ್ಲಿ ಸಿಕ್ಕ ಕಪ್ಪು ಬಣ್ಣದ ಮಿಶ್ರಣದಿಂದಲೇ ಮಗು ಅಸ್ವಸ್ಥವಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಗು ಚೇತರಿಸಿಕೊಂಡಿದೆ. ಘಟನೆ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಂಪು ಪಾನೀಯ ಗುಣಮಟ್ಟ ಪರೀಕ್ಷೆಗೆ ಫುಡ್ ಡಿಪಾರ್ಟ್ಮೆಂಟ್ಗೆ ರವಾನಿಸಲಾಗಿದೆ.