ಹೊಸದಿಗಂತ ವರದಿ ಹುಬ್ಬಳ್ಳಿ:
ಹೆರಿಗೆ ನೋವಿನಿಂದ ಬಳಲುತ್ತಿದ್ದ ಹಾಳಕುಸುಗಲ್ ಗ್ರಾಮದ ಮಹಿಳೆಯೊಬ್ಬರ ಆಸ್ಪತ್ರೆ ಕರೆತರುವಾಗ ಮಾರ್ಗ ಮಧ್ಯ ಆ್ಯಂಬುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರ ನಡೆದಿದೆ.
ಬೆಳಿಗ್ಗೆ 8:20 ಗಂಟೆಗೆ ಸುನೀತಾ ಮೊರಬ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಆಸ್ಪತ್ರೆ ರವಾನಿಸಲು 108 ಆ್ಯಂಬುಲೆನ್ಸ್ ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿ ಗರ್ಭಿಣಿ ಮಹಿಳೆಯನ್ನು ಕರೆದುಕೊಂಡು ಹೋಗುವಾಗ ನೋವು ಹೆಚ್ಚಾಗಿ ಕಂಡು ಬಂದಿದೆ.
ಕೂಡಲೇ ಆ್ಯಂಬುಲೈನ್ಸ್ ಸಿಬ್ಬಂದಿಗಳಾದ ಯಲ್ಲಮ್ಮ ಮತ್ತು ಸೋಮಲಿಂಗಪ್ಪ ಅವರು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ಸುರಕ್ಷಿತವಾಗಿ ಸಾಮಾನ್ಯ ಡೆಲಿವರಿ ಮಾಡಿಸಿದ್ದಾರೆ. ಬಳಿಕ ನವಲಗುಂದ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ.
ಸದ್ಯ ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಇದರಿಂದ ಕುಟುಂಬಸ್ಥರು ಆ್ಯಂಬುಲೆನ್ಸ್ ಸೇವಾ ಕಾರ್ಯಕ್ಕೆ ಮತ್ತು ಸಿಬ್ಬಂದಿ ಯಲ್ಲಮ್ಮ ಮತ್ತು ಸೋಮಲಿಂಗಪ್ಪಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.