ಈ ಹಣ್ಣು ಆರೋಗ್ಯಕ್ಕೆ ಉತ್ತಮ. ಹುಳಿ-ಸಿಹಿ ರುಚಿ ಹೊಂದಿದ ಇಂಡಿಯನ್ ಪಿಯರ್ ಪೇರಳೆ ಹಣ್ಣಿನ ಕುಟುಂಬಕ್ಕೆ ಸೇರಿದ ಹಣ್ಣಾಗಿದ್ದು ಇಂಡಿಯನ್ ಪಿಯರ್ ಎಂದು ಕರೆಯಲಾಗುತ್ತದೆ. ಇದರ ಸಿಪ್ಪೆ ತುಸು ಗಟ್ಟಿ. ಒಳಭಾಗದಲ್ಲಿ ಬೀಜವಿದೆ. ಮಿಶ್ರ ರುಚಿಹೊಂದಿದ್ದು, ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದೆ. ಉತ್ತಮ ನಾರಿನಂಶ, ವಿಟಮಿನ್ ಸಿ, ಸೋಡಿಯಂ, ಕಬ್ಬಿಣಾಂಶ ಹೊಂದಿದೆ.
ಯಕೃತ್ತಿನ ಆರೋಗ್ಯ ಕಾಪಾಡಲು ಪ್ರಯೋಜನಕಾರಿಯಾಗಿದೆ. ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಿದ್ದಲ್ಲದೆ, ಉರಿಯೂತ ನಿವಾರಕವಾಗಿದೆ. ಪಿತ್ತಜನಕಾಂಗದ ಆರೋಗ್ಯ ವೃದ್ಧಿಸುವ ಗುಣ ಹೊಂದಿದೆ. ದೇಹಾರೋಗ್ಯವನ್ನು ವೃದ್ಧಿಸುವುದಲ್ಲದೆ, ದೇಹದ ತೂಕವನ್ನು ಸರಿಯಾಗಿ ಕಾಪಾಡಲು ಸಹಕಾರಿಯಾಗುತ್ತದೆ. ಹೃದಯಾಘಾತ, ಪಾರ್ಶ್ವವಾಯು, ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ತಡೆಗೆ ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶ ಅಧಿಕವಾಗಿದೆ. ಇದು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.
ಹೊಟ್ಟೆಯ ಅನೇಕ ಕಾಯಿಲೆಗಳನ್ನು ದೂರಮಾಡುವುದಲ್ಲದೆ ಜೀರ್ಣಾಂಗ ವ್ಯವಸ್ಥೆ ಸರಿಪಡಿಸುತ್ತದೆ. ಹೊಟ್ಟೆನೋವು, ಗ್ಯಾಸ್, ಮಲಬದ್ಧತೆ ಸಮಸ್ಯೆ ತಡೆಯುತ್ತದೆ. ಕರುಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿ. ದೀರ್ಘಕಾಲದ ಮಲಬದ್ಧತೆ ಸಮಸ್ಯೆ ಸರಿಪಡಿಸುತ್ತದೆ. ಮುಚ್ಚಿದ ರಕ್ತನಾಳಗಳನ್ನು ತೆರೆಯುವಂತೆ ಮಾಡುತ್ತದೆ. ರಕ್ತದ ಗ್ಲುಕೋಸ್ ಮಟ್ಟ ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ. ಪಿಯರ್ ಹಣ್ಣು ನಿಯಮಿತವಾಗಿ ಸೇವಿಸಿ. ಆರೋಗ್ಯವಂತರಾಗಿರಿ.