ಎದುರು ಉತ್ತರ ನೀಡೋ ಮಕ್ಕಳನ್ನು ಸರಿ ದಾರಿಗೆ ತರೋದು ಹೇಗೆ? ಇಲ್ಲಿದೆ ಕೆಲವು ಪೇರೆಂಟಿಂಗ್ ಟಿಪ್ಸ್..

ಮಕ್ಕಳು ನಮ್ಮ ಮಾತು ಕೇಳೋದಿಲ್ಲ, ಎದುರು ಮಾತನಾಡುತ್ತಾರೆ. ಎಲ್ಲಕ್ಕೂ ವಾದ ಮಾಡುತ್ತಾರೆ ಎನ್ನುವ ಪೋಷಕರು ಹಲವರು. ಆದರೆ ಹೀಗೆ ಆಗುವುದು ಏಕೆ? ಸಮಸ್ಯೆಯ ಆಳ ತಿಳಿಯಬೇಕು, ಮಕ್ಕಳು ನಿಮ್ಮ ಮಾತು ಕೇಳಿ, ಉತ್ತಮವಾದ ರೀತಿಯಲ್ಲಿ ಇರುವುದು ಹೀಗೆ..

  • ನೀವು ಸೂಕ್ಷ್ಮವಾದ, ಮೃದುವಾದ ಭಾಷೆಯಲ್ಲಿ ಮಾತನಾಡಿ. ಅವರು ಅದನ್ನೇ ಅನುಸರಿಸುತ್ತಾರೆ.
  • ಪದೇ ಪದೆ ಹೇಳಿದ್ದನ್ನೇ ಹೇಳಬೇಡಿ. ಕೇಳಿದ್ದನ್ನೇ ಕೇಳಿ ಕೇಳಿ ಮಕ್ಕಳು ಮೊಂಡಾಗುತ್ತಾರೆ.
  • ಏನು ಮಾಡಬಾರದು ಎಂದು ಹೇಳುವ ಬದಲು, ಏನು ಮಾಡಿದರೆ ಚೆನ್ನಾಗಿರುತ್ತದೆ ಎಂದು ಮಕ್ಕಳಿಗೆ ಹೇಳಿ
  • ರೂಲ್ಸ್ ಮಾಡಿದರೆ ಸದಾ ಪಾಲನೆ ಆಗುವಂತೆ ನೋಡಿಕೊಳ್ಳಿ
  • ನಿಮ್ಮ ರೂಲ್ಸ್ ಅವರು ಫಾಲೋ ಮಾಡಿದಾಗ ಅವರನ್ನು ಎನ್‌ಕರೇಜ್ ಮಾಡಿ.
  • ಶಿಸ್ತಾಗಿ ಇಲ್ಲ ಎನ್ನುವ ಕಾರಣಕ್ಕೆ ಮಕ್ಕಳನ್ನು ದೂರಬೇಡಿ, ತಿಳಿ ಹೇಳಿ
  • ಮನೆಯಲ್ಲಿ ಇರುವ ಎಲ್ಲ ಸದಸ್ಯರು ಒಬ್ಬರಿಗೊಬ್ಬರು ಗೌರವ ನೀಡಿ, ಮಕ್ಕಳು ನೋಡಿ ಕಲಿಯುವುದು ಹೆಚ್ಚು
  • ಕೆಲವೊಮ್ಮೆ ಅವರು ಗೆಲ್ಲಲು ಬಿಡಿ, ಅವರಿಗೂ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಕೊಡಿ
  • ಅವರಿಗೆ ತಾವು ಪವರ್‌ಫುಲ್ ಎಂದುಕೊಳ್ಳುವುದು ಇಷ್ಟ. ಕೆಲವೊಮ್ಮೆ ಅವರೇ ನಿಮಗಿಂತ ಜಾಣರು ಎಂದು ಒಪ್ಪಿಕೊಳ್ಳಿ
  • ಕೆಲ ಕೆಲಸಗಳಿಗೆ ಧನ್ಯವಾದ, ಕ್ಷಮೆ ಕೇಳುವ ಅಭ್ಯಾಸ ಇರಲಿ
  • ಕೆಲವೊಮ್ಮೆ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕಾದರೆ, ಮಾಡಿಬಿಡಿ
  • ಮಕ್ಕಳಿಂದ ನಾವೇನು ನಿರೀಕ್ಷೆ ಮಾಡುತ್ತೀವಿ ಎನ್ನುವುದನ್ನು ಹೇಳಿ ಆದರೆ ಅದನ್ನು ಮುಟ್ಟದಿದ್ದರೆ ಜಗತ್ತು ಮುಗಿಯುವುದಿಲ್ಲ ಎನ್ನುವ ಮಾತನ್ನೂ ಹೇಳಿ
  • ಬೇರೆ ಬೇರೆ ಆಪ್ಷನ್‌ಗಳನ್ನು ಡಿಸ್ಕಸ್ ಮಾಡಿ, ಸುಮ್ಮನೆ ನಿರ್ಧಾರಕ್ಕೆ ಬರಬೇಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!