MUST READ | ‘ಮಕ್ಕಳು ಓದ್ತಾ ಇಲ್ಲ, ಮಾರ್ಕ್ಸ್ ಕಡಿಮೆ , ನಾಲ್ಕು ಏಟು ಕೊಟ್ಟರೆ ಎಲ್ಲಾ ಸರಿಯಾಗತ್ತೆ’

ಕಷ್ಟ ಪಟ್ಟು ಓದೋದಿಲ್ಲ, ಬರೀ ಸುತ್ತೋದು, ಪೇಂಟಿಂಗ್ ಮಾಡೋದು, ಸ್ವಿಮ್ಮಿಂಗ್ ಮಾಡೋದು ಇಷ್ಟೆ, ಇದನ್ನು ಬಿಟ್ಟರೆ ಅಡುಗೆ ಮನೆಗೆ ಓಡಿಬರೋದು, ಪುಸ್ತಕ ಮಾತ್ರ ಹಿಡಿಯೋದಿಲ್ಲ. ಒದೆ ಕಡಿಮೆಯಾಗಿದೆ, ನಾಲ್ಕು ಬಾರಿಸಿದರೆ ಎಲ್ಲಾ ವಿದ್ಯೆ ತಲೆಗೆ ಹತ್ತತ್ತೆ..

ನಿಮ್ಮ ಮಕ್ಕಳಿಗೂ ಈ ರೀತಿ ಬೈದಿದ್ದೀರಾ? ಬೇರೆ ಮಕ್ಕಳಷ್ಟು ಅಂಕಗಳನ್ನು ನಿಮ್ಮ ಮಕ್ಕಳು ತಂದಿಲ್ಲ ಅನ್ನೋ ಬೇಜಾರಾ? ಹಾಗಿದ್ರೆ ಈ ಪುಟ್ಟ ಕಥೆಯನ್ನು ಓದಲೇಬೇಕು..

ಕಾಡಿನಲ್ಲಿ ರಾಜನ ಪಟ್ಟ ಖಾಲಿ ಇತ್ತು. ರಾಜನಾಗೋಕೆ ಎಲ್ಲ ಪ್ರಾಣಿ, ಪಕ್ಷಿ, ಕೀಟಗಳಿಗೂ ಆಸಕ್ತಿ ಇತ್ತು. ಕೆಲವರು ಇದು ನಮಗೆ ಆಗೋದಿಲ್ಲ ಅಂತ ಸುಮ್ಮನಾಗಿ ಹಿಂದೆ ಹೋದರು. ಹಿಂದೆ ಸರಿದ ಪ್ರಾಣಿಯೊಂದು ರಾಜನ ಪಟ್ಟಕ್ಕಾಗಿ ಸ್ಪರ್ಧೆ ಮಾಡೋಣ ಅಂತ ಹೇಳಿತ್ತು. ಎಲ್ಲ ಪ್ರಾಣಿಗಳೂ ಅದಕ್ಕೆ ಒಕೆ ಅಂದವು.
ಸ್ಪರ್ಧೆಯಲ್ಲಿ ಈಗ ಉಳಿದಿರೋದು ಸಿಂಹ, ಹಾವು, ಮೀನು, ಮಂಗ ಹಾಗೂ ಅಳಿಲು. ಈ ಎಲ್ಲ ಪ್ರಾಣಿಗಳಿಗೂ ಸ್ಪರ್ಧೆ ಏನು ಗೊತ್ತಾ? ಮರ ಹತ್ತೋದು..
ಹೌದು, ಯಾವರು ವೇಗವಾಗಿ ಮರ ಹತ್ತುತ್ತಾರೋ ಅವರೇ ರಾಜ ಎಂದು ಘೋಷಣೆ ಮಾಡಾಯ್ತು!
ಇಷ್ಟೆ ನಮ್ಮ ಕಥೆ ಮುಗಿದು ಹೋಯ್ತು..

ನೀರಿನಲ್ಲಿ ಕ್ಷಣವೇಗದಲ್ಲಿ ಈಜುವ ಮೀನು ಮರ ಹತ್ತೋದು ಹೇಗೆ? ಅಲ್ವಾ? ನೀರಿನಲ್ಲಿ ಈಜೋ ಕಾಂಪಿಟೇಷನ್ ಆಗಿದ್ದರೆ ಅದರಲ್ಲಿ ಮೀನು ಫಸ್ಟ್ ಬರ‍್ತಾ ಇತ್ತು.. ಮಕ್ಕಳು ಓದಿನಲ್ಲೇ ಹೆಚ್ಚು ಅಂಕ ಪಡೀಬೇಕು ಅನ್ನೋದು ಯಾಕೆ? ಅವರು ಮೀನಾ ಅಥವಾ ಮಂಗವಾ? ಮೊದಲು ಅದನ್ನು ಗಮನಿಸಬೇಕಲ್ವಾ?

Painting for Kids - Days With Greyಅಡುಗೆ ಮನೆಗೆ ಆಗಾಗ ಬಂದು ಊಟ ತಿಂಡಿ ಬಗ್ಗೆಯೇ ಆಸಕ್ತಿ ತೋರೋ ಮಕ್ಕಳಿಗೆ ಶೆಫ್ ಆಗಲು ಅಥವಾ ಹೋಂ ಸೈನ್ಸ್ ಮಾಡಲು ಆಸಕ್ತಿ ಇರಬಹುದು.

Future Chefs: Culinary Resources for Kids
ಮನೆಯ ಎಲೆಕ್ಟ್ರಿಕ್ ಐಟಂಗಳನ್ನೆಲ್ಲಾ ಬಿಚ್ಚಿ ಹಾಕುವ ಮಕ್ಕಳಿಗೆ ಇಂಜಿನಿಯರಿಂಗ್ ಆಸಕ್ತಿ ಇರಬಹುದು, ಸ್ವಿಮ್ಮರ್ ಆಗಬಹುದು, ಸಿಂಗರ್ ಆಗಬಹುದು..

Introducing Kids to Repair: It's Easier Than You Think | iFixit Newsಕ್ರಿಕೆಟರ್ ಆಗಬಹುದು, ಸೈಂಟಿಸ್ಟ್ ಆಗಬಹುದು. ಮಕ್ಕಳ ಮೇಲೆ ನಿಮ್ಮ ಕನಸುಗಳನ್ನು ಹೇರದಿರಿ, ಅವರಿಷ್ಟಕ್ಕೆ ಅವರನ್ನು ಬಿಟ್ಟುಬಿಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!