ಎಲ್‌ಕೆಜಿ ಸೇರಲು ಇನ್ಮುಂದೆ ಜೂನ್ 1ಕ್ಕೆ ಮಕ್ಕಳಿಗೆ 4 ವರ್ಷ ತುಂಬಿರಬೇಕು: ಶಿಕ್ಷಣ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2023-24ನೇ ಶೈಕ್ಷಣಿಕ ಸಾಲಿಗೆ (Academic Year) ಎಲ್‌ಕೆಜಿಗೆ ಪ್ರವೇಶ (LKG Admission) ಪಡೆಯುವ ಮಕ್ಕಳು ಜೂನ್ 1ಕ್ಕೆ ನಾಲ್ಕು ವರ್ಷ ತುಂಬಿರಬೇಕು ಎಂದು ಶಿಕ್ಷಣ ಇಲಾಖೆ (Education Board) ಸಮಗ್ರ ಶಿಕ್ಷಣದ ಸುತ್ತೋಲೆ ಹೊರಡಿಸಿದೆ .

2025-26 ರ ವೇಳೆಗೆ ಈ ಮಕ್ಕಳು 6 ವರ್ಷ ವಯಸ್ಸಿನವರಾಗುತ್ತಾರೆ ಎಂದು ಖಚಿತಪಡಿಸಿಕೊಳ್ಳಲು, ಹೊಸ ವಯಸ್ಸಿನ ಮಾನದಂಡವನ್ನು ಜಾರಿಗೆ ತರಲಾಗಿದೆ.
ಇನ್ನು ರಾಜ್ಯದಲ್ಲಿ ಪ್ರಸ್ತುತ ವ್ಯವಸ್ಥೆಯಲ್ಲಿ, ಮಕ್ಕಳು 5 ವರ್ಷ ಮತ್ತು 10 ತಿಂಗಳು ದಾಟಿದರೆ 1 ನೇ ತರಗತಿಗೆ ಸೇರಲು ಅನುಮತಿಸಲಾಗಿದೆ. ಜೂನ್ 2022 ರಲ್ಲಿ, ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಶಿಕ್ಷಣ ಹಕ್ಕು ನಿಯಮಗಳಿಗೆ ಅನುಗುಣವಾಗಿ ಹೊಸ ವಯಸ್ಸಿನ ಮಾನದಂಡಗಳನ್ನು ಬದಲಾಯಿಸುವುದಾಗಿ ಘೋಷಿಸಿತು.

ಏಪ್ರಿಲ್ 27ರ ಸುತ್ತೋಲೆಯಲ್ಲಿ ಎಲ್‌ಕೆಜಿ ಪ್ರವೇಶವನ್ನು ಬಯಸುವ ಮಕ್ಕಳು ಕಡ್ಡಾಯವಾಗಿ ಜೂನ್ 1 ರ ವೇಳೆಗೆ 4 ನೇ ವರ್ಷಕ್ಕೆ ಕಾಲಿಟ್ಟಿರಬೇಕು.

2025-26 ರಿಂದ 1 ನೇ ತರಗತಿಗೆ ವಯಸ್ಸಿನ ಮಾನದಂಡಗಳನ್ನು ಜಾರಿಗೆ ತರಲು, ಈ ವರ್ಷದಿಂದ LKG ಯಲ್ಲಿ ಇದನ್ನು ಅನ್ವಯಿಸಬೇಕಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಯೊಬ್ಬರು ದೃಢಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!