ಜೀವ ವೈವಿಧ್ಯತೆ ಕುರಿತು ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ: ಸುರೇಶ್ ಹೆಬ್ಳೀಕರ್

ಹೊಸದಿಗಂತ ವರದಿ, ಧಾರವಾಡ:
ಉತ್ತರ ಕರ್ನಾಟಕ ಭಾಗದ ಕಪ್ಪತ್ತಗುಡ್ಡ ಹಾಗೂ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಕುರಿತು ಮಕ್ಕಳಿಗೆ ಹಾಗೂ ಯುವಕರಿಗೆ ಪರಿಚಯಿಸುವುದು ಇಂದಿನ‌ ತುರ್ತು ಅಗತ್ಯವಾಗಿದೆ ಎಂದು ಹಿರಿಯ ಪರಿವಾದಿ ಹಾಗೂ ಚಲನಚಿತ್ರ ನಟ ಸುರೇಶ್ ಹೆಬ್ಳೀಕರ್ ತಿಳಿಸಿದರು.
ಅವರು ಧಾರವಾಡದ ತಪೋವನ ಮುಂಭಾಗದಲ್ಲಿ ಯುನೈಟೈಡ್ ಪಾರ್ಕ್ ನಲ್ಲಿ ಧಾರವಾಡದ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವು ನೋಡುತ್ತಾ ಬರುತ್ತಿರುವ ಹಾಗೆ, ಅದರ ಸೌಂದರ್ಯ ವರ್ಷದಿಂದ ವರ್ಷಕ್ಕೆ, ದಿನದಿಂದ ದಿನಕ್ಕೆ ಕ್ಷಿಣಿಸುತ್ತಾ ಸಾಗಿದೆ. ಅದರ ಸಂರಕ್ಷಣೆ, ಪೋಷಣೆ ನಮ್ಮ ಜವಾಬ್ದಾರಿಯಾಗಿದೆ. ಅರಣ್ಯ ಉಳಿದರೆ ಮಾತ್ರ ನಾಡಿನ ಸೌಂದರ್ಯ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಧಾರವಾಡದ ಲಯನ್ಸ್ ಕ್ಲಬ್ ಯುನೈಟೆಡ್ ಪಾರ್ಕ್ ನಲ್ಲಿ ನೂರಾರು ಸಸಿಗಳನ್ನು ನೆಡುವ ಮೂಲಕ ಧಾರವಾಡದ ಪರಿಸರಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.
ಲಯನ್ಸ್ ಕ್ಲಬ್ ಮಾಜಿ ಗರ್ವನರ್, ಹರ್ಷ ಡಂಬಳ, ಕ್ಲಾಸಿಕ್ ಇಂಟರ್ ನ್ಯಾಶನಲ್ ಸ್ಕೂಲ್ ಪ್ರಾಚಾರ್ಯ ಮನೋಹರ, ಲಯನ್ಸ್ ಕ್ಲಬ್ (ರಿಜನ್) ವಿಭಾಗದ ಅಧ್ಯಕ್ಷೆ ಆರತಿ ಕಮಲಾಪುರ, ಸದಸ್ಯರಾದ ನರ್ಮತಾ ಪಾಟೀಲ, ಸಮೀರ್ ಪಾಗೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!