BUDGET | ಬಡವರ ಮಕ್ಕಳು ಬೆಳೀಬೇಕು! ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ 50 ಕೋಟಿ ರೂ. ನಿಗದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಸಿಎಂ ಸಿದ್ದರಾಮಯ್ಯ ತಮ್ಮ 16ನೇ ಬಜೆಟ್‌ ಮಂಡನೆ ಮಾಡುತ್ತಿದ್ದು, ಈ ಬಜೆಟ್‌ನಲ್ಲಿ ಕಾರ್ಮಿಕರ ಬಗ್ಗೆ ಗಮನಹರಿಸಲಾಗಿದೆ.

ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹಿಸಲು ಕಟ್ಟಡ ರಾಜ್ಯದ 31 ಜಿಲ್ಲೆಗಳಲ್ಲಿ 6 ರಿಂದ 12ನೇ ತರಗತಿಯವರೆಗೂ ವಸತಿ ಶಾಲೆಗಳ ಪ್ರಾರಂಭಕ್ಕೆ 750 ಕೋಟಿ ರೂ.ಗಳ ನಿಗದಿ ಮಾಡಲಾಗಿದೆ.

ಇನ್ನು ನೋಂದಾಯಿತ ಕಾರ್ಮಿಕರಿಗೆ ಶೈಕ್ಷಣಿಕ, ವೈದ್ಯಕೀಯ ಸೌಲಭ್ಯಕ್ಕಾಗಿ ನೀಡುತ್ತಿರುವ ಸಹಾಯಧನ ದ್ವಿಗುಣವಾಗಿದ್ದು, ಕಾರ್ಮಿಕರುಸಹಜ ಮರಣ ಹೊಂದಿದಲ್ಲಿ 1.5 ಲಕ್ಷ ಪರಿಹಾರ. ಕೆಲಸದ ಸ್ಥಳದಲ್ಲಿ ಮರಣಹೊಂದಿದರೆ 8 ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಲಾಗಿದೆ.

ಆಯುಷ್ಮಾನ್​ ಭಾರತ್​ ಆರೋಗ್ಯ ಯೋಜನೆಯಡಿ 5 ಲಕ್ಷ ಮಿತಿ ಪೂರ್ಣಗೊಂಡಲ್ಲಿ ಹೃದ್ರೋಗ, ಕ್ಯಾನ್ಸ್​ರಗೆ 5 ಲಕ್ಷ ರೂ. ಇತರೆ ಕಾಯಿಲೆಗಳಿಗೆ 2 ಲಕ್ಷ ರೂ.ಗಳನ್ನು ಪಾವತಿ. ರಾಜ್ಯ ವಿಮಾ ಆಸ್ಪತ್ರೆ(ಇಎಸ್​ಐ) ಮೂಲಸೌಲಭ್ಯ ಹೆಚ್ಚಳ ಮಾಡಲು 51 ಕೋಟಿ ರೂ.ಗಳ ನಿಗದಿ ಮಾಡಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!