October 21, 2026
Wednesday, October 21, 2026
spot_img

ಅಕ್ರಮ ಸಂಬಂಧಕ್ಕೆ ಕರುಳ ಕುಡಿಗಳೇ ಅಡ್ಡಿ : ಅವಳಿ ಮಕ್ಕಳನ್ನು ಕೊ*ಲೆ ಮಾಡಿದ ತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿರುವ ಅವಳಿ ಮಕ್ಕಳನ್ನು ತಾಯಿಯೇ ಕೊಲೆ ಮಾಡಿರುವ ಘಟನೆ ದೀಗ್‌ ಜಿಲ್ಲೆಯ ಬದೇಸ್ರಾ ಗ್ರಾಮದಲ್ಲಿ ನಡೆದಿದೆ.

ವಿನಯ್‌ ಮತ್ತು ವಿಷ್ಣು ಚೌಧರಿ ಮೃತ ಕಂದಮ್ಮಗಳು. ಮಕ್ಕಳು ಬೆಳಗ್ಗೆ ಆಟಕ್ಕೆ ಹೋದ ನಂತರ ಎಷ್ಟು ಸಮಯವಾದರೂ ಮನೆಗೆ ವಾಪಾಸ್‌ ಬಂದಿಲ್ಲ. ತಾಯಿ ಪ್ರೀತಿಯ ಸಹೋದರಿ ಮಕ್ಕಳನ್ನು ಹುಡುಕಿಕೊಂಡು ಹೋಗಿದ್ದರು. ಈ ವೇಳೆ ಮನೆಯಿಂದ ಸ್ವಲ್ಪ ಸಮಯ ದೂರದಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮಕ್ಕಳ ಕತ್ತನ್ನು ಸೀಳೆ ಕೊಲೆ ಮಾಡಿ ಮೃತದೇಹವನ್ನು ಎಸೆಯಲಾಗಿದೆ. ಅವರ ತಲೆಯ ಮೇಲೆ ಗಾಯದ ಗುರುತುಗಳಿವೆ ಎಂದು ಡೀಗ್ ಪೊಲೀಸ್ ಅಧೀಕ್ಷಕ ಕಾಂಬಳೆ ಶರಣ್ ಗೋಪಿನಾಥ್ ತಿಳಿಸಿದ್ದಾರೆ.

ಪ್ರೀತಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ಆಕೆಯ ಸೂಚನೆ ಮೇರೆಗೆ ಬಾಯ್‌ಫ್ರೆಂಡ್‌ ಹಾಗೂ ಮೊದಲ ಮಗ ಈ ಕೊಲೆಯನ್ನು ಮಾಡಿದ್ದಾರೆ. ಸದ್ಯ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅನೈತಿಕ ಸಂಬಂಧಕ್ಕೆ ಮಕ್ಕಳು ವಿರೋಧಿಸಿದ ಕಾರಣ ಅವರನ್ನು ಕೊಲೆ ಮಾಡಲಾಗಿದೆ. ಹಿರಿಯ ಮಗ ಸಪೋರ್ಟ್‌ ಮಾಡಿದ ಕಾರಣ ಆತನ ಜೀವ ಉಳಿದಿದೆ.

Must Read