September 29, 2026
Tuesday, September 29, 2026
spot_img

ಹಾಲು ತರೋಕೆ ಹೋದ ಮಕ್ಕಳು ವಾಪಾಸಾಗಲೇ ಇಲ್ಲ! ಶಾಲಾ ಬಸ್‌ ಹರಿದು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಾಲಾ ಬಸ್‌ ಹರಿದು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಥಣಿಸಂದ್ರದ ಪೊಲೀಸ್‌ ಕ್ವಾಟ್ರಸ್‌ ಬಳಿ ನಡೆದಿದೆ.

ಎರಡು ವರ್ಷದ ವರ್ಷಾ ಹಾಗೂ ನಾಲ್ಕು ವರ್ಷದ ಭಾನು ಮೃತ ಕಂದಮ್ಮಗಳು. ಖಾಸಗಿ ಶಾಲೆಗೆ ಸೇರಿದ ಬಸ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಸದ್ಯ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಡಿಸಿಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೆಣ್ಣೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗನಗೌಡ ಅವರು ಕಾನ್ಸಟೇಬಲ್‌ ಆಗಿ ಕೆಲಸ ಮಾಡ್ತಿದ್ದಾರೆ. ತಮ್ಮ ಮಗಳು ಹಾಗೂ ಅಣ್ಣನ ಮಗಳು ಭಾನುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹಾಲು ತರೋದಕ್ಕೆ ಹೊರಟಿದ್ದಾರೆ. ಈ ವೇಳೆ ಸ್ಕೂಲ್‌ ಬಸ್‌ ಡಿಕ್ಕಿಯಾಗಿದೆ. ಬೈಕ್‌ನಿಂದ ಮಕ್ಕಳು ನೆಲಕ್ಕೆ ಬಿದ್ದಿದ್ದಾರೆ.

ಅವರ ಮೇಲೆಯೇ ಬಸ್‌ನ ಹಿಂಬದಿಯ ಚಕ್ರ ಹರಿದಿದೆ. ಇನ್ನು ಇಬ್ಬರು ಮಕ್ಕಳ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರು ಜಮಾಯಿಸಿದ್ದು, ಮಕ್ಕಳನ್ನ‌ ಕಳೆದುಕೊಂಡ ಹಿನ್ನಲೆ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಹೆಣ್ಣೂರು ಸಂಚಾರ ಪೊಲೀಸರು ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Must Read