ನೌಕರರ ನಿವೃತ್ತಿ ವಯಸ್ಸು ಹೆಚ್ಚಿಸಲು ಮುಂದಾದ ಚೀನಾಗೆ ಏನೆಲ್ಲಾ ಸಮಸ್ಯೆ ಉದ್ಭವಿಸಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇಶವೊಂದರ ಜನಸಂಖ್ಯೆ ಆ ದೇಶದ ಸಾಮರ್ಥ್ಯಕ್ಕಿಂತಲೂ ಹೆಚ್ಚಿನದಾಗಿ ಬೆಳೆದರೆ ಏನೆಲ್ಲಾ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದಕ್ಕೆ ಚೀನಾ ದೇಶವು ಸ್ಪಷ್ಟ ಉದಾಹರಣೆ.
ಒಂದು ಕುಂಟುಂಬಕ್ಕೆ ಒಂದು ಮಗು ಮತ್ತಿತರೆ ನಿರ್ಧಾರಗಳಿಂದಾಗಿ ಚೀನಾದಲ್ಲಿ ವೃದ್ಧರ ಸಂಖ್ಯೆಯು ಹೆಚ್ಚುತ್ತಿದೆ. ಮತ್ತೊಂದೆಡೆ ಚೀನಾವು ತನ್ನ ಉದ್ಯೋಗಿಗಳಿಗೆ ವಿಶ್ವದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ನಿವೃತ್ತಿ ನೀಡುತ್ತದೆ. ಹೀಗೆ ನಿವೃತ್ತಿಗೊಳ್ಳುತ್ತಿರುವ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಾಣುತ್ತಿರುವುದು ಚೀನಾಕ್ಕೆ ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಏಕೆಂದರೆ ಹೀಗೆ ನಿವೃತ್ತರಾದವರ ಪಿಂಚಣಿಗೆ ಸರ್ಕಾರ ಖರ್ಚು ಮಾಡುತ್ತಿರುವ ಹಣದ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಪಿಂಚಣಿಗಾಗಿಯೇ ದೇಶದ ಬೊಕ್ಕಸದ ಹೆಚ್ಚಿನ ಹಣ ಬರಿದಾಗುತ್ತಿದೆ.
ಈ ಸಮಸ್ಯೆಯನ್ನು ನಿಭಾಯಿಸಲು ಚೀನಾವು ಅಧಿಕಾರಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ. ಪುರುಷರಿಗೆ 60 ಮತ್ತು ಮಹಿಳೆಯರಿಗೆ 50 ರಿಂದ 55 ವರ್ಷಗಳಿಗೆ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಮುಂದಾಗಿದೆ. ಈ ನಿರ್ಧಾರದ ಹಿಂದೆ ದುಡಿಯುವ ವಯಸ್ಸಿನ ಜನಸಂಖ್ಯೆ ಕುಸಿತದ ಪರಿಣಾಮಗಳನ್ನು ಸರಿದೂಗಿಸುವುದು, ಅನುಭವಿ ಕೆಲಸಗಾರರನ್ನು ಉದ್ಯೋಗದಲ್ಲಿ ಇರಿಸಿಕೊಳ್ಳುವುದು ಮತ್ತು ವೃದ್ಧರ ಕಲ್ಯಾಣಕ್ಕೆ ಹೆಚ್ಚುವರಿ ಹಣ ಖರ್ಚಾಗುವುದನ್ನು ತಪ್ಪಿಸುವ ಲೆಕ್ಕಾಚಾರಗಳಿವೆ. ಆದರೆ ನಿವೃತ್ತಿ ವಯಸ್ಸಿನ ಹೆಚ್ಚಳ ಪ್ರಸ್ತಾಪಕ್ಕೆ ಚೀನಾದ ಯುವ ಸಮೂಹದಿಂದ ವಿರೋಧ ವ್ಯಕ್ತವಾಗಿದೆ. ವಯಸ್ಕರಿಗೆ ಹೆಚ್ಚಿನ ಉದ್ಯೋಗವಾಕಾಶ ನೀಡುವುದು ನಮ್ಮ ಉದ್ಯೋಗಾವಕಾಶಗಳನ್ನುಕಿತ್ತುಕೊಂಡಂತಾಗುತ್ತದೆ. ಯುವಕರು ಉದ್ಯೋಗವಿಲ್ಲದೆ ಪರಿತಪಿಸುವುದು ದೇಶದಲ್ಲಿ ಮತ್ತೊಂದು ಹಂತದ ಅಸಮಾನತೆಗೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!