ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿಯಲ್ಲಿ ಚೀನಾ ಈಗಲೂ ಭಾರತಕ್ಕೆ ಅಸಾಧಾರಣ ಸವಾಲಾಗಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಹೇಳಿದ್ದಾರೆ.
ಬೂಮಿಯ ಮೇಲಷ್ಟೇ ಅಲ್ಲ, ಇದೀಗ ಸಮುದ್ರದ ಗಡಿಗಳಲ್ಲಿಯೂ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. ಸಂಭಾವ್ಯ ಎದುರಾಳಿಗಳ ವಿರುದ್ಧ ಯುದ್ಧ ತಳ್ಳಿ ಹಾಕುವ ಮಾತಿಲ್ಲ, ಆದರೆ ಸಶಸ್ತ್ರ ಕಾರ್ಯಾಚರಣೆ ಇಲ್ಲದೆಯೇ ಯುದ್ಧವಾಗಬಹುದು ಎಂದಿದ್ದಾರೆ.
ಪಾಕಿಸ್ತಾನ ಕೂಡ ಮಿಲಿಟರಿ ಆಧುನೀಕರಣ ಮುಂದುವರಿಸಿದೆ. ಸಾಂಪ್ರದಾಯಕ ಮಿಲಿಟರಿ ಸವಾಲುಗಳ ಮಧ್ಯೆ ಭಯೋತ್ಪಾದನೆ ಒಂದು ಪ್ರಮುಖ ಭದ್ರತಾ ಬೆದರಿಕೆಯಾಗಿ ಉಳಿದಿದೆ ಎಂದಿದ್ದಾರೆ. ಶತ್ರುಗಳಿಗಿಂತ ನಾವು ಒಂದು ಹೆಜ್ಜೆ ಮುಂದೆ ಇರುವುದು ಅತ್ಯಾವಶ್ಯ ಎಂದಿದ್ದಾರೆ.